ಪೊನ್ನಂಪೇಟೆ, ಮಾ. ೨೫: ತಾ. ೨೯ ರಂದು ನಡೆಯಲಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ೫೭ ಅಭ್ಯರ್ಥಿಗಳ ಪೈಕಿ ೬ ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದಿದ್ದಾರೆ. ೨೦ ಸ್ಥಾನಗಳನ್ನು ಹೊಂದಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೨ನೇ ವಿಭಾಗದಲ್ಲಿ ಅಮ್ಮತ್ತೀರ ಆರತಿ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ೧೯ ಸ್ಥಾನಗಳಿಗೆ ೫೧ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅಭ್ಯರ್ಥಿಗಳಿಗೆ ಈಗಾಗಲೇ ಚಿಹ್ನೆಯನ್ನು ಮಂಜೂರು ಮಾಡಲಾಗಿದ್ದು, ಎಲ್ಲಾ ಅಭ್ಯರ್ಥಿಗಳು ಮತ ಬೇಟೆಗಾಗಿ ಮತದಾರರ ಮನೆ ಮನೆಗೆ ತೆರಳುತ್ತಿದ್ದಾರೆ.
ಪೊನ್ನಂಪೇಟೆ ಗ್ರಾಮ ಪಂಚಾಯಿತಿ ೬ ವಿಭಾಗಗಳನ್ನು ಹೊಂದಿದ್ದು, ೧ನೇ ವಿಭಾಗದಲ್ಲಿರುವ ೪ ಸ್ಥಾನಗಳಿಗೆ ೧೩ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅಬ್ಜಲ್ ಬೇಗ್, ಆಲಿರ ರಶೀದ್, ಹೆಚ್. ಎಸ್. ಜಯಲಕ್ಷಿö್ಮ, ಬಯವಂಡ ಕೆ. ನವನೀಸ್, ಪಿ.ಡಿ. ನೇತ್ರಾವತಿ, ಅಪ್ಪಯ್ಯ ಮಚ್ಚಿಯಂಡ, ಮೂಕಳೇರ ಸುಮಿತ ಗಣೇಶ್, ರಾಣಿ ಹೆಚ್.ಆರ್., ರಾಮಕೃಷ್ಣ ಕೆ.ವಿ., ರೂಪ ಉತ್ತಪ್ಪ, ಎಂ.ಎ. ವಿಜು, ಪಿ.ಎನ್. ಸುನಂದ, ಶೋಭಾ ಪರಮೇಶ್ವರ್ ಕಣದಲ್ಲಿದ್ದಾರೆ.
೨ನೇ ವಿಭಾಗದಲ್ಲಿರುವ ೨ ಸ್ಥಾನಗಳಲ್ಲಿ ಈಗಾಗಲೇ ೧ ಸ್ಥಾನ ಅವಿರೋಧ ಆಯ್ಕೆಯಾಗಿದ್ದು, ಉಳಿದ ೧ ಸ್ಥಾನಕ್ಕೆ ನಂದಾ ಪೂಣಚ್ಚ ಮೂಕಳೇರ ಮತ್ತು ಮಧು ಮೂಕಳೇರ ಸೆಣೆಸಾಟ ನಡೆಸಲಿದ್ದಾರೆ.
೩ನೇ ವಿಭಾಗದಲ್ಲಿರುವ ೩ ಸ್ಥಾನಕ್ಕೆ ೮ ಅಭ್ಯರ್ಥಿಗಳು ಕಣದಲ್ಲಿದ್ದು, ಮಂಜುಳ ಸುರೇಶ್, ಪಿ.ಜಿ. ಯಮುನ, ಡೈನಾ ಪಾರ್ವತಿ ಮಾಂಗೇರ, ಪುಚ್ಚಿಮಾಡ ವಸಂತ ತಿಮ್ಮಯ್ಯ, ಬೆನಿಟಾ ಪೀಟರ್, ಲಕ್ಷö್ಮಣ ಮೂಕಳೇರ, ವಿಜಯಕುಮಾರ್. ಪಿ.ಕೆ, ಕೊಳೇರ ಭಾರತಿ ಸ್ಪರ್ಧೆಯಲ್ಲಿದ್ದಾರೆ.
೪ನೇ ವಿಭಾಗದಲ್ಲಿರುವ ೪ ಸ್ಥಾನಕ್ಕೆ ೧೧ ಅಭ್ಯರ್ಥಿಗಳು ಕಣದಲ್ಲಿದ್ದು, ಗಿರೀಶ್ ಎಸ್.ಟಿ, ಜುನೇದ್ ಸಿ.ಎ., ಮನುಕುಮಾರ್, ಭರತ್ ಕೇಚೆಟ್ಟಿರ, ರವಿ. ಹೆಚ್.ಎನ್, ಕರ್ತಮಾಡ ರಸಿಕ ಅಶ್ವತ್, ರಾಧಿಕ ಚೆಪ್ಪ್ಪುಡಿರ, ರಂಗನ್ ಟಿ.ಕೆ., ಸಂತೋಷ್ ಡಿ.ವಿ, ಸಿದ್ದಯ್ಯ ಹೆಚ್.ಎನ್., ಅಣ್ಣಿರ ಹರೀಶ್ ಗೆಲುವಿಗಾಗಿ ಶತ ಪ್ರಯತ್ನ ಪಡುತ್ತಿದ್ದಾರೆ. ೫ನೇ ವಿಭಾಗದಲ್ಲಿರುವ ೩ ಸ್ಥಾನಕ್ಕೆ ೭ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅನೀಶ್ ಎಂ.ಬಿ., ಅಬ್ದುಲ್ ಅಜೀಜ್, ಝಾನ್ಸಿ ಸುರೇಶ್, ದಶಮಿ ಡಿ.ವಿ, ಮನುರತ್ನ, ಮೇರಿ ಶೈನಿ, ಮಂಜುಳ ಮಣಿಕಂಠ ಕಣದಲ್ಲಿದ್ದಾರೆ.
೬ನೇ ವಿಭಾಗದಲ್ಲಿರುವ ೪ ಸ್ಥಾನಕ್ಕೆ ೯ ಅಭ್ಯರ್ಥಿಗಳು ಕಣದಲ್ಲಿದ್ದು, ಉಮೇಶ್ ಆರ್, ಗಿರಿಜ. ಹೆಚ್.ವಿ, ಅಡ್ಡಂಡ ನಿಲನ್, ಮತ್ರಂಡ ದೀಪಕ್ ಭೀಮಯ್ಯ, ಮಚ್ಚಮಾಡ ವಿಲ್ಮ, ಮೈಮುನಾ ಕೆ.ಎಂ, ಬಸ್ ರಮೇಶ್, ಸುಜಿತ ಪಿ.ಪಿ, ಕಳಕಂಡ ಸುಮತಿ ಚುನಾವಣಾ ಕಣದಲ್ಲಿದ್ದಾರೆ.
ಪೊನ್ನಂಪೇಟೆ ಪಂಚಾಯಿತಿ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶತಾಯ ಗತಾಯ ಪ್ರಯತ್ನ ಪಡುತ್ತಿದ್ದು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
- ಚನ್ನನಾಯಕ