ಮಡಿಕೇರಿ, ಮಾ. ೨೫: ಕೋವಿಡ್ ಲಸಿಕೆ ಹಾಕುವ ಅಭಿಯಾನದಂತೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನಿವೃತ್ತ ಉಪತಹಶೀಲ್ದಾರ್ ವೈ.ಪಿ. ತಿಮ್ಮಯ್ಯ ಅವರು ಮನವಿ ಮಾಡಿದ್ದಾರೆ.
ಪ್ರಸ್ತುತ ೬೦ ವರ್ಷ ಮೇಲ್ಪಟ್ಟವರು ಲಸಿಕೆಗಾಗಿ ಕೇಂದ್ರಕ್ಕೆ ತೆರಳುತ್ತಿದ್ದಾರೆ. ಆದರೆ ಅಲ್ಲಿ ಸೂಕ್ತ ತಯಾರಿ ಇಲ್ಲದೆ ನೂಕುನುಗ್ಗಲಾಗುತ್ತಿದೆ. ಇರುವ ಸಿಬ್ಬಂದಿಗಳು ಸೂಕ್ತವಾಗಿ ಜನರಿಗೆ ಸ್ಪಂದಿಸಲು ಆಗುತ್ತಿಲ್ಲ. ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ ಸಿಬ್ಬಂದಿ ಕೊರತೆ ಇರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸಂಬAಧಿಸಿದ ಇಲಾಖೆ ಹಾಗೂ ಜಿಲ್ಲಾಡಳಿತ ಗಮನ ಹರಿಸಿ ವ್ಯವಸ್ಥೆ ಸರಿಪಡಿಸುವಂತೆ ತಿಮ್ಮಯ್ಯ ಕೋರಿದ್ದಾರೆ.