ವೀರಾಜಪೇಟೆ, ಮಾ. ೨೩: ಕೊರೊನಾ ಹಿನ್ನೆಲೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಂಸ, ಮೀನು ಮಾರುಕಟ್ಟೆ ಸೇರಿದಂತೆ ಇನ್ನಿತರ ಹರಾಜು ಪ್ರಕ್ರಿಯೆಯನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಿ ಹಿಂದಿನ ದರವನ್ನೇ ಪಡೆಯುವಂತೆ ಪಂಚಾಯಿತಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಟಿ.ಆರ್. ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿಕೆ. ಪ್ರಥ್ವಿನಾಥ್, ಮಹಮದ್ ರಾಫಿ, ಎಂ.ಕೆ ದೇಚಮ್ಮ, ಆಶಾ ಸುಬ್ಬಯ್ಯ ಮಾತನಾಡಿ ಕಳೆದ ಬಾರಿ ಕೊರೊನಾದಿಂದಾಗಿ ೩ ತಿಂಗಳು ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮಾಂಸ ಹಾಗೂ ಮೀನು ಮಾರುಕಟ್ಟೆಗಳನ್ನು ಖರೀದಿಸಿದ ವ್ಯಾಪಾರಸ್ಥರು ಬಹಳ ನಷ್ಟದಲ್ಲಿ ಇರುವುದರಿಂದ ಒಂದು ವರ್ಷಗಳ ಕಾಲ ಹಿಂದಿನ ದರವನ್ನೆ ಮುಂದುವರೆಸಿದರೆ ಅವರ ನಷ್ಟ ಭರಿಸಿದಂತಾಗುತ್ತದೆ ಎಂದು ಹೇಳಿದಾಗ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು. ಮುಖ್ಯಾಧಿಕಾರಿ ಶ್ರೀಧರ್ ಹಿಂದಿನ ದರಕ್ಕಿಂತ ಶೇ. ೧೦ ಹೆಚ್ಚು ಮಾಡಿದರೆ ಪಂಚಾಯಿತಿಗೆ ಆದಾಯ ಬರುತ್ತದೆ ಎಂದು ಹೇಳಿದಾಗ ಒಂದು ವರ್ಷದ ಮಟ್ಟಿಗೆ ಹಿಂದಿನ ದರವೇ ಇರಲಿ ಎಂದು ಸರ್ವ ಸದಸ್ಯರು ಒಕ್ಕೊರಲಿನಿಂದ ತಿರಸ್ಕರಿಸಿದರು. ಸಭೆ ಹಿಂದಿನ ದರಕ್ಕೆ ನಿರ್ಣಯ ಕೈಗೊಳ್ಳಲಾಯಿತು.
ಕಳೆದ ಬಾರಿಯ ಹರಾಜಿನಲ್ಲಿ ಮೀನು ಮಾರುಕಟ್ಟೆಯಲ್ಲಿ ೧೨.೫೯ ಲಕ್ಷ, ವಾಹನ ಎತ್ತಾವಳಿ ೨.೨೦ ಲಕ್ಷ, ಸಂತೆ ಶುಲ್ಕ ಎತ್ತಾವಳಿ ೧.೧೬ ಲಕ್ಷ, ಹಂದಿಮಾAಸ ಮಾರುಕಟ್ಟೆ ೪.೫೮ ರೂ ಗಳಲ್ಲಿ ಒಟ್ಟು ೨೦.೫೩ ಲಕ್ಷ ಹರಾಜು ಪ್ರಕ್ರಿಯೆ ನಡೆದಿತ್ತು.
ಮಹಮದ್ ರಾಫಿ ಮಾತನಾಡಿ ಬೇಸಿಗೆ ಪ್ರಾರಂಭವಾಗಿರುವುದರಿAದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಕೇವಲ ಬೇತ್ರಿ ನೀರನ್ನು ನಂಬಿಕೊAಡು ಇರಲು ಸಾಧ್ಯವಿಲ್ಲ. ಪಟ್ಟಣದಲ್ಲಿ ಒಟ್ಟು ೧೦ ಕುಡಿಯುವ ನೀರಿನ ತೆರೆದ ಬಾವಿಗಳಿವೆ. ಅದರಲ್ಲಿ ೨ ಬಾವಿಗಳಲ್ಲಿ ಮಾತ್ರ ನೀರು ಸರಬರಾಜಾಗುತ್ತಿದೆ. ಉಳಿದ ೮ ಬಾವಿಗಳು ನಿಷ್ಕಿçಯಗೊಂಡಿವೆ. ಅದನ್ನು ಸರಿಪಡಿಸಿದರೆ ಆಯಾಯ ವಾರ್ಡ್ಗಳಿಗೆ ನೀರು ನೀಡಬಹುದು ಎಂದು ಹೇಳಿದಾಗ ಮುಖ್ಯಾಧಿಕಾರಿ ಶ್ರೀಧರ್ ಕೂಡಲೇ ಕ್ರಮಕೈಗೊಳ್ಳುವಂತೆ ಅಭಿಯಂತರ ಹೇಮಕುಮಾರ್‌ಗೆ ಸೂಚಿಸಿದರು.
ಮತೀನ್ ಮಾತನಾಡಿ ಅಭಿಯಂತರ ಹೇಮಕುಮಾರ್ ಅವರು ವಾರದಲ್ಲಿ ಮೂರು ದಿನ ವೀರಾಜಪೇಟೆ, ಮೂರು ದಿನ ಸೋಮವಾರಪೇಟೆಯಲ್ಲಿ ಕಾರ್ಯ ನಿರ್ವಹಿಸುವದರಿಂದ ಇಲ್ಲಿನ ಯಾವ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಅವರನ್ನು ಇಲ್ಲಿಯೆ ಕಾರ್ಯನಿರ್ವಹಿಸುವಂತೆ ಮಾಡಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಹರ್ಷವರ್ದನ್, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜೂನಾ ಸುನೀತಾ, ಮುಖ್ಯಾಧಿಕಾರಿ ಶ್ರೀಧರ್, ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.