ವೀರಾಜಪೇಟೆ, ಮಾ. ೨೩: ವೀರಾಜಪೇಟೆಯ ಸಿದ್ದಾಪುರದ ರಸ್ತೆಯಲ್ಲಿರುವ ಮಗ್ಗುಲ, ಐಮಂಗಲ, ಚಂಬೆಬೆಳ್ಳೂರು, ಕುಕ್ಲೂರು ಗ್ರಾಮ ವ್ಯಾಪ್ತಿಗೊಳಪಡುವ ಮಲೆ ತಿರಿಕೆಬೆಟ್ಟದಲ್ಲಿರುವ ಮಲೆ ಮಹಾದೇಶ್ವರ ದೇವರ ವಾರ್ಷಿಕೋತ್ಸವವು ತಾ. ೧೫ ರಿಂದ ಆರಂಭಗೊAಡು ಆರು ದಿನಗಳ ತನಕ ಭಕ್ತಾದಿಗಳಿಂದ ಶ್ರದ್ಧಾಭಕ್ತಿಯಿಂದ ನಡೆದು ಕೊಡಿಮರ ಇಳಿಸುವುದರೊಂದಿಗೆ ದೇವರಿಗೆ ಮಹಾಪೂಜಾ ಸೇವೆ ಸಲ್ಲಿಸಿ ವಾರ್ಷಿಕ ಉತ್ಸವ ಸಂಪನ್ನಗೊAಡಿತು.
ತಾ. ೧೫ ರಿಂದ ವಿವಿಧ ಸಂಪ್ರದಾಯಿಕ ವಿಧಿವಿಧಾನದೊಂದಿಗೆ ಆರಂಭಗೊAಡ ಉತ್ಸವದ ಆರು ದಿನಗಳವರೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೋವಿಡ್-೧೯ ಷರತ್ತಿಗೊಳಪಟ್ಟು ಉತ್ಸವ ಏರ್ಪಡಿಸಲಾಗಿತ್ತು. ಉತ್ಸವದ ಎಲ್ಲ ದಿನಗಳಲ್ಲೂ ಸುತ್ತ ಮುತ್ತಲ ಗ್ರಾಮಗಳ ಭಕ್ತಾದಿಗಳು ಹಾಜರಾಗಿದ್ದರು.