ಮಡಿಕೇರಿ, ಮಾ. ೨೩: ಮೂರ್ನಾಡು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಲತಾ ಶೆಟ್ಟಿ ರಾಜ್ಯಮಟ್ಟದ ಜ್ಞಾನಜ್ಯೋತಿ ಪ್ರಶಸ್ತಿಯನ್ನು ದಾವಣಗೆರೆಯಲ್ಲಿ ನಡೆದ ಶೈಕ್ಷಣಿಕ ಸಮಾವೇಶದಲ್ಲಿ ಪಡೆದುಕೊಂಡರು. ಶಾಲಾ ವಿದ್ಯಾರ್ಥಿಗಳನ್ನು ವಿವಿಧ ಪಂದ್ಯಾಟದಲ್ಲಿ ವಿಭಾಗಮಟ್ಟ ಹಾಗೂ ರಾಜ್ಯಮಟ್ಟಕ್ಕೆ ತಲುಪಿಸಿದ ಸಾಧನೆ ಹಿನ್ನೆಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕ್ರೀಡೆಯ ಜೊತೆಗೆ ಅರೋಬಿಕ್ಸ್, ಯೋಗಾಸನ, ಬ್ಯಾಂಡ್ ವಾದನ, ಸೇವಾದಳ, ಸ್ಕೌಟ್ ಗೈಡ್ನಲ್ಲೂ ವಿದ್ಯಾರ್ಥಿಗಳನ್ನು ಶಿಕ್ಷಕಿ ತರಬೇತುಗೊಳಿಸಿದ್ದಾರೆ. ಭೂ ಕುಸಿತ ಹಾಗೂ ಕೋವಿಡ್ ಪರಿಸ್ಥಿತಿಯಲ್ಲೂ ಜನರ ನೆರವಿಗೆ ಸ್ಪಂದಿಸಿದ್ದಾರೆ