ಮುಳ್ಳೂರು, ಮಾ. ೨೩: ಸಮಿಪದ ಗೋಪಾಲಪುರ ಚರ್ಚ್ನಲ್ಲಿ ಸಂತ ಜೋಸೆಫರ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬಲಿಪೂಜೆ ಪ್ರಾರಂಭದ ಮೊದಲು ಜೋಸೆಫರ ಪ್ರತಿಮೆಯನ್ನು ಚರ್ಚಿನ ಸುತ್ತ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಬಲಿಪೂಜೆ ನೆರವೇರಿಸಿದ ಫಾ. ಜಾಕಬ್ ಕೊಳನೂರು ಸಂತ ಜೋಸೆಫರ ಕುರಿತು ಪ್ರಭೋದನೆ ನೀಡಿದರು. ಈ ಸಂದರ್ಭ ಕೊರೊನಾ ಕಾಯಿಲೆ ಬೇಗ ನಿವಾರಣೆಯಾಗುವಂತೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಕ್ರೆöÊಸ್ತ ಬಾಂಧವರು ಪಾಲ್ಗೊಂಡಿದ್ದರು ಅನ್ನಸಂತರ್ಪಣೆ ನಡೆಯಿತು.