ಗೋಣಿಕೊಪ್ಪಲು, ಮಾ. ೨೩: ಅರಣ್ಯ ಇಲಾಖೆಯ ಮಹಾಸಂರಕ್ಷಣಾ ಅಧಿಕಾರಿ ವಿಜಯ್ ಗೋಗಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಕಳೆದ ೧೬ ದಿನಗಳಿಂದ ರೈತ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆಯನ್ನು ಮಂಗಳವಾರ ಹಿಂಪಡೆಯಲಾಯಿತು.ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಮಾ.೮ ರಂದು ಹುದಿಕೇರಿ ಸಮೀಪದ ಬೆಳ್ಳೂರು ಜಂಕ್ಷನ್ನಲ್ಲಿ ಹಲವು ಸಂಘ ಸಂಸ್ಥೆಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಲಾಗಿತ್ತು.ನAತರದ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆದಿತ್ತು. ಅಂತಿಮವಾಗಿ ಬೆಂಗಳೂರಿನ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಮಾಡಲಾಗಿತ್ತು. ಈ ಸಂದರ್ಭ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಪಿಸಿಸಿಎಪ್ ವಿಜಯ್ ಗೋಗಿ ಹೋರಾಟಕ್ಕೆ ಸ್ಪಂದಿಸುವ ಮೂಲಕ ಸಹಕರಿಸಿದರು. ಆದ್ದರಿಂದ ಅಹೋರಾತ್ರಿ ಪ್ರತಿಭಟನೆ ಹಿಂಪಡೆಯಲಾಗಿದೆ. ಇದರಿಂದಾಗಿ ಹೋರಾಟವು
(ಮೊದಲ ಪುಟದಿಂದ) ತಾರ್ಕಿಕ ಅಂತ್ಯ ಕಂಡಿರುವುದಾಗಿ ಮನು ಸೋಮಯ್ಯ ಅವರು ಇಂದು ಬೆಳ್ಳೂರಿನಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು.
ಶಾಸಕರ ಸಮ್ಮುಖದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಸಚಿವರ ಸಮ್ಮುಖದಲ್ಲಿ ಸಭೆ ನಡೆಸುವುದಾಗಿ ಭರವಸೆ ಸಿಕ್ಕಿದೆ ಎಂದು ಮನುಸೋಮಯ್ಯ ಸಭೆಗೆ ಮಾಹಿತಿ ನೀಡಿದರು.
ಮುಂದೆ ವನ್ಯಜೀವಿಗಳಿಂದ ರೈತರ ಜಾನುವಾರು ಮೃತಪಟ್ಟರೆ ಪ್ರಸ್ತುತ ನೀಡಲಾಗುತ್ತಿರುವ ಹತ್ತು ಸಾವಿರ ಪರಿಹಾರವನ್ನು ಮೂವತ್ತು ಸಾವಿರಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸದ್ಯದಲ್ಲೇ ಇದು ಆದೇಶವಾಗಿ ಬರಲಿದೆ. ಹುಲಿ ಕಾರ್ಯಾಚರಣೆ ಯನ್ನು ಸ್ಥಳೀಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ನಡೆಸಲಾಗುತ್ತದೆ.
ಹುಲಿ ಕಾರ್ಯಾಚರಣೆ ಸಂದರ್ಭ ಸಾಕಾನೆಗಳ ಮೂಲಕ ರೈತರ ತೋಟ ಹಾಗೂ ಜಮೀನಿನಲ್ಲಿ ಹಾನಿ ಉಂಟು ಮಾಡಿದ ಪರಿಣಾಮ ಇದಕ್ಕೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂಬ ಭರವಸೆ ವಿಜಯ್ ಗೋಗಿಯವರಿಂದ ದೊರೆತಿದೆ. ಈ ಹಿನ್ನೆಲೆ ಪ್ರತಿಭಟನೆ ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮನು ಸೋಮಯ್ಯ ಸಭೆಗೆ ವಿವರಣೆ ನೀಡಿದರು.
ಸಭೆಯಲ್ಲಿ ಕಿಗ್ಗಟ್ಟುನಾಡು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಕಾಟಿಮಾಡ ಜಿಮ್ಮಿ ಅಯ್ಯಣ್ಣ, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್ ಮಾತನಾಡಿ, ಹೋರಾಟಕ್ಕೆ ಜಯವಿದೆ ಎಂಬುದು ಸಾಬೀತು ಪಡಿಸಲಾಗಿದೆ. ಮುಂದೆಯೂ ರೈತ ಸಂಘ ನಡೆಸುವ ಹೋರಾಟದಲ್ಲಿ ಒಗ್ಗಟ್ಟಿನಿಂದ ಪಾಲ್ಗೊಂಡು ಹೋರಾಟದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸೋಣ ಎಂದರು.
ಇಟ್ಟಿರ ಲಾಲಪ್ಪ, ಇಟ್ಟಿರ ವಿಷ್ಣು, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಚಂಗುಲAಡ ಸೂರಜ್, ಮೀದೇರಿರ ಕವಿತರಾಮ್, ಅಪ್ಪಚಂಗಡ ಮೋಟಯ್ಯ, ಚಕ್ಕೇರ ಸನ್ನಿ, ವಕೀಲರಾದ ಹೇಮಚಂದ್ರ ಮುಂತಾದ ಗಣ್ಯರು ತಮ್ಮ ಅಭಿಪ್ರಾಯ ಮಂಡಿಸಿದರು.
ರೈತ ಸಂಘದ ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುಕೋ ಸಂಘಟನೆಯ ಮುಖಂಡರಾದ ಮಚ್ಚಮಾಡ ಅನೀಶ್ ಮಾದಪ್ಪ, ಬೆಳೆಗಾರರ ಒಕ್ಕೂಟದ ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಮಾಣೀರ ಮುತ್ತಪ್ಪ, ಚೊಟ್ಟೆಯಂಡಮಾಡ ಉದಯ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮುಖಂಡರಾದ ಚೊಟ್ಟೆಕಾಳಪಂಡ ಮನು, ತೀತರಮಾಡ ರಾಜ, ಕರ್ತಮಾಡ ಸುಜಾ, ಪುಚ್ಚಿಮಾಡ ರಾಯ್ ಮಾದಪ್ಪ, ಮೀದೇರಿರ ಕವಿತರಾಮ್, ಕರ್ತಮಾಡ ಚಿತ್ರ, ಇಟ್ಟಿರ ಅನಿತ ಲಾಲಪ್ಪ, ಕಾಳಿಮಾಡ ಸುನಿತ, ಪುಚ್ಚಿಮಾಡ ಶಿಲ್ಪ ರಾಯ್, ಕಿತ್ತಿರಾ ರೀಟಾ, ಚಕ್ಕೆರ ಸನ್ನಿ, ಉಪಸ್ಥಿತರಿದ್ದರು.