ಸೋಮವಾರಪೇಟೆ, ಮಾ. ೨೨: ಕಳೆದ ವರ್ಷ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಹೊನಲುಬೆಳಕಿನ ಕಬಡ್ಡಿ ಪಂದ್ಯಾಟದ ಸಂದರ್ಭ ಬೈಕ್ ಕಳ್ಳತನ ಮಾಡಿದ್ದ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸೋಮವಾರಪೇಟೆ ಹಾಗೂ ಕುಶಾಲನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ಸಂದರ್ಭ ನೆರೆಯ ಮೈಸೂರು ಜಿಲ್ಲೆಯ ಬೆಟ್ಟದಪುರದಲ್ಲಿಯೂ ಇದೇ ರೀತಿ ಬೈಕ್ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದು, ಆರೋಪಿಗಳಾದ ಕುಶಾಲನಗರ ಕರಿಯಪ್ಪ ಬಡಾವಣೆಯ ಕೆ.ಯು. ಬಾಲಕೃಷ್ಣ ಅವರ ಪುತ್ರ ಯು.ಬಿ. ಕೀರ್ತನ್ ಹಾಗೂ ಕೊಣನೂರಿನ ಕೆರೆಬೇಲಿ ನಿವಾಸಿ ಅನ್ವರ್ ಅವರ ಪುತ್ರ ಇರ್ಫಾನ್ ಅವರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಸೋಮವಾರಪೇಟೆಯಿಂದ ಕಳುವಾಗಿದ್ದ ಪಲ್ಸರ್ ಹಾಗೂ ಬೆಟ್ಟದಪುರದಿಂದ ಕಳವು ಮಾಡಲಾಗಿದ್ದ ಎಫ್‌ಜೆಡ್ ಯಮಹ ಬೈಕ್‌ಗಳನ್ನು (ರೂ. ೧.೩೦ ಲಕ್ಷ ಮೌಲ್ಯ) ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಶೈಲೇಂದ್ರ, ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್, ಸೋಮವಾರಪೇಟೆ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಕುಶಾಲನಗರ ಪಟ್ಟಣ ಠಾಣಾಧಿಕಾರಿ ಗಣೇಶ್, ಸೋಮವಾರಪೇಟೆ ಠಾಣಾಧಿಕಾರಿ ಎಂ.ಸಿ. ಶ್ರೀಧರ್, ಎಎಸ್‌ಐ ಖತೀಜಾ, ಸಿಬ್ಬಂದಿಗಳಾದ ಶಿವಕುಮಾರ್, ಪ್ರವೀಣ್, ಬಸಪ್ಪ, ಹರ್ಷಿತ್, ಕ್ರೆöÊಂ ಸಿಬ್ಬಂದಿಗಳಾದ ಎಎಸ್‌ಐ ಗೋಪಾಲ್, ದಯಾನಂದ್, ಸಜಿ, ಸುಧೀಶ್, ರಂಜಿತ್, ಸಿಡಿಆರ್ ಘಟಕದ ಗಿರೀಶ್, ರಾಜೇಶ್ ಅವರುಗಳು ಭಾಗವಹಿಸಿದ್ದರು.

ವಾಹನಗಳ ಮಾಲೀಕರು ರಾತ್ರಿ ವೇಳೆಯಲ್ಲಿ ತಮ್ಮ ವಾಹನಗಳನ್ನು ಮನೆಯ ಹೊರಗೆ ನಿಲ್ಲಿಸದೇ ಮನೆಯ ಕಾಂಪೌAಡ್/ಬೇಲಿಯೊಳಗೆ ಅಥವಾ ಶೆಡ್ಡಿನಲ್ಲಿ ನಿಲುಗಡೆಗೊಳಿಸುವ ಮೂಲಕ ಮುಂಜಾಗ್ರತೆ ವಹಿಸಬೇಕೆಂದು ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಮನವಿ ಮಾಡಿದ್ದಾರೆ.