ಸುನಿಲ್ ಪ್ರಶ್ನೆಗೆ ಸಚಿವರ ಉತ್ತರ
ಮಡಿಕೇರಿ, ಮಾ. ೨೨: ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿನ ನೂತನ ತೂಗು ಸೇತುವೆ ಬಳಿ ಇರುವ ಶಿಥಿಲಗೊಂಡ ಹಳೆಯ ಸೇತುವೆ ಅಪಾಯಕಾರಿಯಾಗಿದ್ದು, ಇದನ್ನು ನವೀಕರಿಸಲು ಅಥವಾ ತೆರವು ಮಾಡಲು ಕೈಗೊಂಡ ಕ್ರಮದ ಬಗ್ಗೆ ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಕೊಡಗು ವೃತ್ತದ ಮಡಿಕೇರಿ ಪ್ರಾದೇಶಿಕ ವಿಭಾಗದ ಕಾವೇರಿ ನಿಸರ್ಗಧಾಮದಲ್ಲಿನ ಹಳೇ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಈ ಸೇತುವೆಯನ್ನು ದುರಸ್ತಿಪಡಿಸಲು ಅಸಾಧ್ಯವಾಗಿದ್ದು, ತೆರವು ಮಾಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.