ಮಡಿಕೇರಿ, ಮಾ. ೨೨: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಕೋರಿಕೆ ಮೇರೆ ೨೦೨೦-೨೧ನೇ ಸಾಲಿನ ಆರ್ಥಿಕ ವರ್ಷದ ಆಯವ್ಯಯದಲ್ಲಿ ಘೋಷಣೆಯಾಗಿರುವಂತೆ ನಾಡ ಕಚೇರಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ.ಅದರಂತೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಪೊನ್ನಂಪೇಟೆ ನಾಡ ಕಚೇರಿ, ಶ್ರೀಮಂಗಲ ಮತ್ತು ಹುದಿಕೇರಿ ನಾಡ ಕಚೇರಿಗೆ ಸಂಬAಧಿಸಿದAತೆ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಪ್ರತೀ ಕಟ್ಟಡಕ್ಕೆ ಅಂದಾಜು ಮೊತ್ತ.

(ಮೊದಲ ಪುಟದಿಂದ) ರೂ. ೧೮,೮೪,೦೦೦ (ರೂಪಾಯಿ ಹದಿನೆಂಟು ಲಕ್ಷದ ಎಂಭತ್ತ ನಾಲ್ಕು ಸಾವಿರ ಮಾತ್ರ) ರಂತೆ ಒಟ್ಟು ೫೬,೫೨,೦೦೦ (ರೂಪಾಯಿ ಐವತ್ತಾರು ಲಕ್ಷದ ಐವತ್ತೆರಡು ಸಾವಿರ ಮಾತ್ರ) ಅನುದಾನವು ಬಿಡುಗಡೆಯಾಗಿದೆ. ಪೊನ್ನಂಪೇಟೆ ನೂತನ ತಾಲೂಕು ರಚನೆಗೊಂಡಿದ್ದು, ತಾಲೂಕು ಕಚೇರಿ ಕಾರ್ಯಾರಂಭಕ್ಕೆ ಕಚೇರಿ ಕಟ್ಟಡ ದುರಸ್ತಿ ಮತ್ತು ಉನ್ನತೀಕರಣ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಸಲುವಾಗಿ ಸರ್ಕಾರದಿಂದ ರೂ. ೨೫ ಲಕ್ಷ ಬಿಡುಗಡೆಯಾಗಿದ್ದು, ನಿಗದಿಪಡಿಸಿದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸರ್ಕಾರ ಆದೇಶಿಸಲಾಗಿದೆ.