ಕೂಡಿಗೆ, ಮಾ. ೨೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಆನೆ ಕೆರೆ ಗ್ರಾಮದ ಸರ್ವೆ ನಂಬರ್ ೩೦ರ ಜಾಗದಲ್ಲಿ ಒತ್ತುವರಿ ಆಗಿದೆ ಎಂಬ ದೂರಿನ ಮೇರೆಗೆ ಕಂದಾಯ ಇಲಾಖೆಯ ವತಿಯಿಂದ ಸರ್ವೆ ಕಾರ್ಯ ನಡೆಸಲಾಯಿತು. ಚಿಕ್ಕತ್ತೂರು ಗ್ರಾಮದ ಆನೆ ಕೆರೆ ಒತ್ತುವರಿಯಾಗಿದೆ ಎಂಬ ಬಗ್ಗೆ ಕಳೆದ ಅನೇಕ ವರ್ಷಗಳಿಂದ ದೂರುಗಳು ಬರುತ್ತಲಿವೆ. ಅಲ್ಲದೆ ಕಳೆದ ಬಾರಿಯೂ ಸರ್ವೆ ಕಾರ್ಯ ನಡೆದಿತ್ತು. ಇಂದು ಮತ್ತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಅರ್. ಮಂಜುಳ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಕಂದಾಯ ಇಲಾಖೆಯ ನಿರೀಕ್ಷಕ ಸಂತೋಷ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ದಿನೇಶ್, ಖತೀಜ, ಗೌರಮ್ಮ, ಜಯಣ್ಣ, ಫಿಲೋಮಿನಾ, ಮಾಜಿ ಸದಸ್ಯ ಕುಮಾರ್ ಸ್ವಾಮಿ ಶಕ್ತಿ ಕೇಂದ್ರದ ಪ್ರಮುಖ ಪ್ರವಿಣ್ ಕುಮಾರ್, ಕೃಷ್ಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ, ಅವಿನಾಶ್ ಗ್ರಾಮ ಪ್ರಮುಖರಾದ ವರದರಾಜ್ ದಾಸ್, ರವಿ, ಗಿರೀಶ್, ಮಂಜು, ಸೇರಿದಂತೆ ಸರ್ವೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.