ನಾಪೋಕ್ಲು, ಮಾ. ೨೧: ಮರದ ಕೊಂಬೆ ಕಡಿಯುವ ಸಂದರ್ಭ ಕಬ್ಬಿಣದ ಏಣಿ ೧೧ ಕೆ.ವಿ ವಿದ್ಯುತ್ ತಂತಿಗೆ ತಗುಲಿದ ಕಾರಣ ಕಾರ್ಮಿಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆಯಲ್ಲಿ ನಡೆದಿದೆ.
ಚೆಯ್ಯಂಡಾಣೆ ಗ್ರಾಮದ ಮುಂಡ್ಯೋಳAಡ ತಮ್ಮಯ್ಯ ಅವರ ತೋಟದಲ್ಲಿ ಕಾರ್ಮಿಕನಾಗಿದ್ದ ಚಂದ್ರ (೪೨) ಮೃತಪಟ್ಟ ದುರ್ಧೈವಿ. ಮೃತ ವ್ಯಕ್ತಿ ಪತ್ನಿ, ಮಗ ಸೇರಿದಂತೆ ೬ ಜನ ಕಾರ್ಮಿಕರು ತಮ್ಮಯ್ಯ ಅವರ ಕಾಫಿ ತೋಟದಲ್ಲಿ ಮರ ಕಪಾತು ಮಾಡುತ್ತಿದ್ದರು. ವಿದ್ಯುತ್ ತಂತಿಯ ಪಕ್ಕದಲ್ಲಿರುವ ಮರಗಳ ರೆಂಬೆ ಕಡಿಯದಂತೆ ತಮ್ಮಯ್ಯ ಕಾರ್ಮಿಕರಿಗೆ ಸೂಚಿಸಿ ಮನೆಗೆ ತೆರಳಿದ್ದರು. ಆದರೂ ಚಂದ್ರ ಮರ ಕಡಿಯಲು ಮುಂದಾಗಿದ್ದಾರೆ. ಸಹ ಕಾರ್ಮಿಕರು ಕೂಡ ರೆಂಬೆ ಕಡಿಯುವುದು ಬೇಡ ಎಂದಿದ್ದರAತೆ. ಮರಕ್ಕೆ ಏಣಿ ಇಡುವ ಸಂದರ್ಭ ಏಣಿ ವಾಲಿ ವಿದ್ಯುತ್ ತಂತಿಗೆ ತಗುಲಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಆರ್.ಕಿರಣ್, ಎಎಸ್‌ಐ ಕುಶಾಲಪ್ಪ ಮತ್ತು ಸಿಬ್ಬಂದಿಗಳು ತೆರಳಿ ಪರಿಶೀಲಿಸಿದರು. ಈ ಬಗ್ಗೆ ಮೃತನ ಪತ್ನಿ ನೀಡಿದ ದೂರಿನನ್ವಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರಿಸಲಾಯಿತು.