ಸೋಮವಾರಪೇಟೆ, ಮಾ. ೨೧: ಸಮೀಪದ ಕುಸುಬೂರು ಗ್ರಾಮದ ಕೆಂಚಮ್ಮನಬಾಣೆಯ ಶಕ್ತಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ೧೮ ವಯಸ್ಸಿನೊಳಗಿನ ಬಾಲಕರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು ಬಾಯ್ಸ್ ತಂಡ ಪ್ರಥಮ ಬಹುಮಾನವನ್ನು ತನ್ನ ಮುಡಿಗೇರಿಸಿಕೊಂಡರೆ, ದ್ವಿತೀಯ ಬಹುಮಾನವನ್ನು ಕುಶಾಲನಗರದ ಜೆಬಿಎಸ್‌ಸಿ ತಂಡ ಪಡೆದುಕೊಂಡಿತು.
ಕೆAಚಮ್ಮನಬಾಣೆಯ ಆಟದ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ತಂಡಗಳು ಭಾಗವಹಿಸಿದ್ದವು.
ಪಂದ್ಯಾಟವನ್ನು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಸದಸ್ಯೆ ನಾಗಮಣಿ ಮಹದೇವ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾರತ್ ಮಾತಾ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ್, ನಾಗಬ್ರಹ್ಮ ಮೊಗೇರ್ಕಳ ಯುವಕ ಸಂಘದ ಕಾರ್ಯದರ್ಶಿ ಸದಾನಂದ್, ಶಕ್ತಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಕೆ.ಎ. ದಿನೇಶ್, ಕ್ರೀಡಾಧ್ಯಕ್ಷ ನಂದ, ಖಜಾಂಚಿ ರಾಜ ಹಾಜರಿದ್ದರು.
ಸಂಜೆ ಶಕ್ತಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಕೆ.ಎ. ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಬಿಳಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶುಕೃತ, ಅಂರ‍್ರಾಷ್ಟಿçÃಯ ಕಬಡ್ಡಿ ಪಂದ್ಯದಲ್ಲಿ ಗುರುತಿಸಿಕೊಂಡಿರುವ ಗೋಣಿಮರೂರಿನ ಸಚಿನ್ ಪೂವಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಪಂದ್ಯಾಟದಲ್ಲಿ ಬೆಸ್ಟ್ ಕ್ಯಾಚರ್ ಆಗಿ ಬೆಟ್ಟದಳ್ಳಿಯ ಜೀವನ್‌ಕುಮಾರ್, ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ಪುತ್ತೂರಿನ ಸಂತೋಷ್ ಪಡೆದರು. ಮಹಿಳೆಯರಿಗೆ ಆಯೋಜಿಸಿದ್ದ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಇಂದಿರಾ ಸದಾನಂದ್ ಪ್ರಥಮ, ಪುಷ್ಪಾ ದ್ವಿತೀಯ, ವಿಷದ ಚೆಂಡು ಸ್ಪರ್ಧೆಯಲ್ಲಿ ಶ್ರೇಯಾ ದಿನೇಶ್ ಪೂಜಾರಿ ಪ್ರಥಮ ಹಾಗೂ ಪುಷ್ಪಾ ದ್ವಿತೀಯ ಬಹುಮಾನ ಪಡೆದರು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್, ಬಾಬು, ಕರ್ಕಳ್ಳಿಯ ಇಸಾಕ್, ಗ್ರಾ.ಪಂ. ಮಾಜಿ ಸದಸ್ಯ ಉಲ್ಲಾಸ್ ಕಾರ್ಯನಿರ್ವಹಿಸಿದರು.