ಮಡಿಕೇರಿ, ಮಾ. ೨೧: ತಾ. ೧೮ ರಂದು ಸ.ಹಿ.ಪ್ರಾ. ಶಾಲೆ ವಾಟೆಕಾಡು ಇಲ್ಲಿಯ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಮಕ್ಕಳಿಗೆ ಪಕ್ಷಿ ತಜ್ಞ ಡಾ. ಎಸ್.ವಿ ನರಸಿಂಹನ್ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಪಕ್ಷಿಗಳ ಜೀವನ ಕ್ರಮ, ಉಪಯೋಗ, ಅವುಗಳ ಸಂರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸಿದರು. ಕಾರ್ಯಕ್ರಮದಲ್ಲಿ ಸ.ಹಿ.ಪ್ರಾ. ಶಾಲೆ ಹೊದ್ದೂರು ಹಾಗೂ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಮತ್ತು ಮಕ್ಕಳು ಪಾಲ್ಗೊಂಡರು. ಕಾರ್ಯಕ್ರಮವನ್ನು ಇಕೋ ಕ್ಲಬ್ ಮಾರ್ಗದರ್ಶಕಿ ಶಿಕ್ಷಕಿ ಸೌಮ್ಯ ಬಿ.ಜಿ. ಇವರು ಸಂಯೋಜಿಸಿದ್ದರು.