ಮಡಿಕೇರಿ, ಮಾ. ೨೧: ಮೈಂಡ್ ಆ್ಯಂಡ್ ಮ್ಯಾಟರ್ ಸಂಸ್ಥೆಯ ವತಿಯಿಂದ ಕೊಡಗು ದಂತ ಮಹಾವಿದ್ಯಾಲಯ ಸಹಯೋಗದಲ್ಲಿ ಬಾಲಮಂದಿರದ ೬೦ ಬಾಲಕ, ಬಾಲಕಿಯರಿಗೆ ಉಚಿತ ದಂತ ತಪಾಸಣಾ ಶಿಬಿರ ನಡೆಯಿತು.

ಶಿಬಿರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅರುಂದತಿ ಚಾಲನೆ ನೀಡಿದರು. ಈ ಸಂದರ್ಭ ಸಂಸ್ಥೆ ಸಂಸ್ಥಾಪಕಿ ದೀಪಿಕಾ, ಪ್ರಮುಖರಾದ ಡಾ. ಅಚ್ಚಯ್ಯ, ಕಾವ್ಯ, ಪೂಣಚ್ಚ, ದಂತ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕತಿರೇಸನ್, ಡಾ. ಶುಭಶ್ರೀ, ಡಾ. ಅನಂತಕೃಷ್ಣ, ಡಾ. ಸಮಂತ, ಡಾ. ಶ್ರೀಲಕ್ಷಿö್ಮ, ಸಹಾಯಕರಾದ ವಿನಿತ್, ಗಗನ್ ಇದ್ದರು.