ಭಾರತದಿಂದ ವಿದೇಶಗಳಿಗೆ ೬ ಕೋಟಿ ಲಸಿಕೆ

ಚಂಡೀಗಢ, ಮಾ. ೨೧: ಭಾರತದಿಂದ ೭೬ ದೇಶಗಳಿಗೆ ಈವರೆಗೂ ೬ ಕೋಟಿಗೂ ಹೆಚ್ಚು ಕೋವಿಡ್-೧೯ ಲಸಿಕೆಗಳನ್ನು ಕಳಿಸಿಕೊಡಲಾಗಿದೆ. ದೇಶಾದ್ಯಂತ ೪.೫ ಕೋಟಿ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಲಸಿಕೆ ಅಭಿಯಾನವನ್ನು ಜನಾಂದೋಲನವನ್ನಾಗಿಸಲಾಗಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ. ತಾ. ೨೧ ರ ಬೆಳಿಗ್ಗೆವರೆಗೂ ದೇಶಾದ್ಯಂತ ೪.೫ ಕೋಟಿ ಕೋವಿಡ್-೧೯ ಲಸಿಕೆ ನೀಡಲಾಗಿದೆ. ೬ ಕೋಟಿಗೂ ಹೆಚ್ಚು ಲಸಿಕೆಗಳನ್ನು ೭೬ ದೇಶಗಳಿಗೆ ಕಳಿಸಿಕೊಡಲಾಗಿದೆ. ಪ್ರಧಾನಿ ಹಾಗೂ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆಪಿ ನಡ್ಡಾ ಲಸಿಕೆ ಅಭಿಯಾನವನ್ನು ಜನಾಂದೋಲನವನ್ನಾಗಿ ಮಾಡಲು ಕರೆ ನೀಡಿದ್ದರು ಎಂದು ಚಂಡೀಗಢದ ಸಿಎಸ್‌ಐಆರ್-ಐಎಂಟಿಇಸಿಹೆಚ್‌ನಲ್ಲಿ ನಡೆದ ಮಾಧ್ಯಮ ಸಂವಹನದಲ್ಲಿ ಹರ್ಷವರ್ಧನ್ ತಿಳಿಸಿದ್ದಾರೆ. ತಾ. ೨೧ ರಂದು ಹರ್ಷವರ್ಧನ್ ಹೈದರಾಬಾದ್‌ಗೂ ಭೇಟಿ ನೀಡಿದ್ದು, ಅಟಲ್ ಇನ್ಕ್ಯುಬೇಷನ್ ಸೆಂಟರ್‌ನ ವಿಸ್ತರಣೆಯ ಭಾಗವಾಗಿರುವ ಐಎಂಟಿಇಸಿಹೆಚ್ ಬಯೋ ಇನ್ನೋವೇಷನ್ ಕೇಂದ್ರವನ್ನು ಉದ್ಘಾಟಿಸಿದರು.

ಆಸಿಡ್ ಲಾರಿ ಪಲ್ಟಿ-ಮೂವರ ದುರ್ಮರಣ

ಹಾಸನ, ಮಾ. ೨೧: ಹಾಸನ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಕೆಮಿಕಲ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ, ನಂತರ ಬೆಂಕಿ ದುರಂತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಅರಕಲಗೂಡು ತಾಲೂಕಿನ ಬಸವನಹಳ್ಳಿ ಬಳಿ ನಡೆದಿದೆ. ಅರಕಲಗೂಡು ತಾಲೂಕಿನ ಬಸವನಹಳ್ಳಿ ಬಳಿ ಆಸಿಡ್ ಕೆಮಿಕಲ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಪರಿಣಾಮ ಬೆಂಕಿ ಹೊತ್ತಿ ದಗದಗನೇ ಉರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಜೀವ ದಹನವಾಗಿದ್ದು, ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಮೃತರನ್ನು ಲಾರಿ ಚಾಲಕ ಪುಟ್ಟರಾಜು, ಪ್ರಮೋದ, ಪರಮೇಶ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅರಕಲಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಕೊರೊನಾ ಸೋಂಕು

ನವದೆಹಲಿ, ಮಾ. ೨೧: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಭಾನುವಾರ ಮಹಾಮಾರಿ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆ ಓಂ ಬಿರ್ಲಾ ಅವರನ್ನು ರಾಷ್ಟç ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಓಂ ಬಿರ್ಲಾ ಅವರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಆರೋಗ್ಯ ಸ್ಥಿತಿ ಕುರಿತು ಏಮ್ಸ್ ಹೇಳಿಕೆ ನೀಡಿದ್ದು, ತಾ. ೧೯ ರಂದು ಓಂ ಬಿರ್ಲಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ತಾ. ೨೦ ರಂದು ಏಮ್ಸ್ ಕೋವಿಡ್ ಸೆಂಟರ್‌ಗೆ ದಾಖಲಾಗಿದ್ದಾರೆ. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದೆ.

ಸಿಡಿ ಪ್ರಕರಣ: ಉದ್ಯಮಿ ಮನೆ ಮೇಲೆ ಎಸ್‌ಐಟಿ ದಾಳಿ

ಬೆಂಗಳೂರು, ಮಾ. ೨೧: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಗೆ ಬಂಡವಾಳ ಹಾಕಿರುವ ಶಂಕೆಯ ಮೇರೆಗೆ ನಗರದ ಉದ್ಯಮಿಯೊಬ್ಬರ ಮನೆ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತನಿಖಾ ದಳ ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಪ್ರಕರಣ ಸಂಬAಧ ತನಿಖೆ ಚುರುಕುಗೊಳಿಸಲಾಗಿದ್ದು, ಎಸ್‌ಐಟಿ ಅಧಿಕಾರಿಗಳು ನಿನ್ನೆಯಷ್ಟೇ ಜೆಪಿ ನಗರದಲ್ಲಿರುವ ಬೆಂಗಳೂರು ಮೂಲಕ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪ್ರಕರಣ ಸಂಬAಧ ಬಂಧನಕ್ಕೊಳಗಾಗಿರುವ ಶಂಕಿತ ವ್ಯಕ್ತಿಗಳು ಈ ಉದ್ಯಮಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ. ಶಂಕಿತರಿಗೆ ಹಣಕಾಸು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಈ ಉದ್ಯಮಿ ಕಲ್ಪಿಸಿದ್ದ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾಹಿತಿ ಖಚಿತವಾಗುತ್ತಿದ್ದಂತೆಯೇ ದಾಳಿ ನಡೆಸಿ ೨ ಗಂಟೆಗಳ ಕಾಲ ಪರಿಶೀಲನೆ ನಡೆಸಿದೆ. ಮನೆಯಲ್ಲಿ ಉದ್ಯಮಿ ಇರಲಿಲ್ಲ. ಈ ವೇಳೆ ಕುಟುಂಬ ಸದಸ್ಯರನ್ನು ವಿಚಾರಣೆಗೊಳಪಡಿಸಲಾಗಿತ್ತು. ೧೦ ದಿನಗಳ ಹಿಂದೆಯೇ ಈತ ಮನೆ ತೊರೆತಿದ್ದು, ಸಿಸಿಟಿ ದೃಶ್ಯಾವಳಿಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.