ಮಡಿಕೇರಿ, ಮಾ. ೨೧: ಜಿಲ್ಲೆಯಲ್ಲಿ ಎಚ್.ಐ.ವಿ., ಏಡ್ಸ್ ಮನೆ ಮನೆ ಮಾಹಿತಿ ಆಂದೋಲನವು ತಾ. ೨೩ ರಿಂದ ವೀರಾಜಪೇಟೆ ತಾಲೂಕಿನ ೧೧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ನಡೆಯಲಿದೆ. ಜಾನಪದ ಕಲಾತಂಡಗಳ ಮೂಲಕ ಎಚ್.ಐ.ವಿ. ಏಡ್ಸ್ ಕುರಿತು ಪ್ರದರ್ಶನ ನೀಡಲಾಗುತ್ತದೆ. ಕಾರ್ಯಕ್ರಮದ ಉದ್ಘಾಟನೆಯು ತಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ವೀರಾಜಪೇಟೆ ತಾಲೂಕಿನ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ.