ನಾಪೋಕ್ಲು, ಮಾ. ೨೧: ತಾ. ೨೧ರಿಂದ ೨೮ರವರೆಗೆ ವೆಸ್ಟ್ ಕೊಳಕೇರಿ ಶ್ರೀ ಭಗವತಿ ದೇವಿಯ ವಾರ್ಷಿಕ ಉತ್ಸವ ನಡೆಯಲಿದೆ. ತಾ.೨೨ರಂದು ರಾತ್ರಿ ದೀಪಾರಾಧನೆ, ತಾ. ೨೩ರಂದು ಪಟ್ಟಣಿ ಹಬ್ಬ, ತಾ.೨೪ರಂದು ದೇವರ ಅವಭೃತ ಸ್ನಾನ, ನೃತ್ಯಬಲಿ, ತಾ.೨೫ರಂದು ಶುದ್ಧ ಕಲಶ ಮತ್ತು ತಾ.೨೮ರಂದು ಬೇಟೆಗಾರ ಅಯ್ಯಪ್ಪ ದೇವರ ಪೂಜೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.