ಗೋಣಿಕೊಪ್ಪಲು, ಮಾ.೨೧ : ಕೊಡಗು ಪ್ರೊಫೆಷನಲ್ ಚೆಸ್ ಕ್ಲಬ್, ವೈಸ್ ಮೆನ್ ಕ್ಲಬ್ ಮತ್ತು ರೋಟರಿ ಕ್ಲಬ್ ಗೋಣಿಕೊಪ್ಪ, ಇವರ ಸಂಯುಕ್ತ ಆಶ್ರಯದಲ್ಲಿ ತಾ.೨೮ ರಂದು ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ.
ಬೆಳಿಗ್ಗೆ ೯ ಗಂಟೆಗೆ ಅರ್ವತೋಕ್ಲು ಸರ್ವದೈವತಾ ಶಾಲೆಯ ಆವರಣದಲ್ಲಿ ೩ ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದ್ದು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದಲ್ಲಿ ಪಂದ್ಯ ನಡೆಯಲಿದೆ ಆಸಕ್ತರು ತಾ. ೨೬ ರೊಳಗೆ ೯೯೦೦೯೨೭೦೯೫ ಮತ್ತು ೯೪೪೮೩೮೩೯೧೦ ದೂರವಾಣಿಯಲ್ಲಿ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಕೊಡಗು ಪ್ರೊಫೆಷನಲ್ ಚೆಸ್ ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್ ತಿಳಿಸಿದ್ದಾರೆ.