ನಾಪೋಕ್ಲು, ಮಾ. ೨೧: ನಾಪೋಕ್ಲು ಗ್ರಾಮ ಪಂಚಾಯಿತಿ, ನಾಪೋಕ್ಲು ಚೆಂಬರ್ ಆಫ್ ಕಾಮರ್ಸ್ ವತಿಯಿಂದ ನಾಪೋಕ್ಲು ಪಟ್ಟಣದಲ್ಲಿ ಸಾವನ್ನಪ್ಪಿದ ಅನಾಥ ವ್ಯಕ್ತಿಯ ಶವಕ್ಕೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಆರ್.ಕಿರಣ್ ನೇತೃತ್ವದಲ್ಲಿ ಅಂತ್ಯಸAಸ್ಕಾರ ನೆರವೇರಿಸಲಾಯಿತು.

೧೦ ವರ್ಷಗಳ ಹಿಂದೆ ತಮಿಳುನಾಡಿನಿಂದ ಪಟ್ಟಣಕ್ಕೆ ಆಗಮಿಸಿ ಅಂಗಡಿಗಳ ಹೊರ ಭಾಗದಲ್ಲಿ ವಾಸ ಮಾಡಿಕೊಂಡು ಸಣ್ಣಪುಟ್ಟ ಕೆಲಸ ನಿರ್ವಹಿಸುತ್ತಿದ್ದ ಪಳನಿ (೫೬) ಅನಾರೋಗ್ಯದಿಂದ ಮೃತಪಟ್ಟರು. ಯಾವದೇ ಸಂಬAಧಿಗಳು ಇಲ್ಲದ ಹಿನೆÀ್ನಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸAಸ್ಕಾರ ನೆರವೇರಿಸಲಾಯಿತು.