ಮಡಿಕೇರಿ, ಮಾ. ೨೦: ಬಿಜೆಪಿ ರೈತ ಮೋರ್ಚಾದ ಮಡಿಕೇರಿ ನಗರಾಧ್ಯಕ್ಷರಾಗಿ ತಾತಪಂಡ ನಂದಉತ್ತಪ್ಪ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಶಶಿಧರ್ ರೈ, ಕೆ.ಬಿ. ಕಾರ್ಯಪ್ಪ, ಬಿದ್ದಂಡ ಸುಜಾ, ಜಿ.ಎಂ. ಶಿವಕುಮಾರ್, ಚಾವಂಡ ಮನು ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ವಿ. ಮುರುಗೇಶ್, ಭವಾನಿ ನೇಮಕಗೊಂಡಿದ್ದಾರೆ.
ಕಾರ್ಯದರ್ಶಿಗಳಾಗಿ ಕೆ. ಸುಶೀಲ, ಭರತ್, ಎಂ.ಆರ್. ಜಗದೀಶ್, ಬಿ.ಕೆ. ಸತೀಶ್ ರೈ, ಕೆ. ನಂಜಪ್ಪ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಸಂತೋಷ್ ವಿನೋದ್, ಸದಸ್ಯರುಗಳಾಗಿ ಕುಡುಮಂಡ ಉತ್ತಪ್ಪ, ಬೆಪ್ಪುರನ ಬೋಪಯ್ಯ, ಕುಟ್ಟನ ಕೀರ್ತನ್, ಪರ್ಲಕೋಟಿ ಪ್ರೀತು, ಪಿ.ಟಿ. ಉತ್ತಮ್, ಮಾಳೆಯಂಡ ನಂಜಪ್ಪ, ರುಕ್ಮಿಣಿ, ಚಂದ್ರಿ ನೇಮಕಗೊಂಡಿದ್ದಾರೆ ಎಂದು ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.