ಮಡಿಕೇರಿ, ಮಾ. ೧೯: ನಗರದ ಕೊಡಗು ವಿದ್ಯಾಲಯದ ಸಿನಿಮಾ ಕ್ಲಬ್ ವತಿಯಿಂದ ದೀಕ್ಷಾ ಎಂಬ ಮಕ್ಕಳ ಚಿತ್ರವನ್ನು ಪ್ರದರ್ಶಿಸಲಾಯಿತು.
ಸಿನಿಮಾ ಪ್ರದರ್ಶನವನ್ನು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಭವಿಷ್ಯದ ದಾರಿಯಾಗಿದೆ. ಶೈಕ್ಷಣಿಕ ವಿಚಾರಗಳೊಂದಿಗೆ ಕಲೆ, ಕ್ರೀಡೆ, ಸಾಹಿತ್ಯದಲ್ಲಿಯೂ ಕೂಡ ವಿದ್ಯಾರ್ಥಿಗಳು ಅಭಿರುಚಿ ಮಡಿಕೇರಿ, ಮಾ. ೧೯: ನಗರದ ಕೊಡಗು ವಿದ್ಯಾಲಯದ ಸಿನಿಮಾ ಕ್ಲಬ್ ವತಿಯಿಂದ ದೀಕ್ಷಾ ಎಂಬ ಮಕ್ಕಳ ಚಿತ್ರವನ್ನು ಪ್ರದರ್ಶಿಸಲಾಯಿತು.
ಸಿನಿಮಾ ಪ್ರದರ್ಶನವನ್ನು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಭವಿಷ್ಯದ ದಾರಿಯಾಗಿದೆ. ಶೈಕ್ಷಣಿಕ ವಿಚಾರಗಳೊಂದಿಗೆ ಕಲೆ, ಕ್ರೀಡೆ, ಸಾಹಿತ್ಯದಲ್ಲಿಯೂ ಕೂಡ ವಿದ್ಯಾರ್ಥಿಗಳು ಅಭಿರುಚಿ ಆಗುಹೋಗುಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಸಮಾಜದಲ್ಲಿ ಮುಕ್ತವಾಗಿ ಬೆರೆಯುವುದರಿಂದ ಕಲಿಕೆಗೆ ಅವಕಾಶ ಸಿಗುತ್ತದೆ. ಅನುಭವಗಳು ಉತ್ತಮ ವ್ಯಕ್ತಿತ್ವ ರೂಪಿಸಲು ಕಾರಣವಾಗುತ್ತವೆ. ಎಷ್ಟೇ ವಿದ್ಯಾವಂತರಾದರು ವಿನಯ ಮೈ ಗೂಡಿಸಿಕೊಳ್ಳಬೇಕು. ಸುಸಂಸ್ಕೃತರಾಗಿ ಬದುಕಬೇಕು. ಇದರೊಂದಿಗೆ ಸಾಮಾಜಿಕವಾಗಿ ತೊಡಗಿಸ ಕೊಳ್ಳಬೇಕು. ಮನುಷ್ಯರು ಪ್ರಕೃತಿ ಅವಲಂಭಿತರು ಈ ಹಿನ್ನೆಲೆ ನಾವು ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ವ್ಯಕ್ತಿತ್ವ ವಿಕಸನಕ್ಕೆ ಮುಂದಾಗುವAತೆ ಕರೆ ನೀಡಿದರು.
ದೀಕ್ಷಾ ಸಿನಿಮಾ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಸಿನಿಮಾದ ಬಗ್ಗೆ ಪೋಷಕರಲ್ಲಿ ತಪ್ಪು ಅಭಿಪ್ರಾಯವಿದೆ. ಆದರೆ, ಸಿನಿಮಾದಿಂದ ಕಲಿಯುವುದು ಬಹಳಷ್ಟಿವೆ. ನೂರು ವರ್ಷದ ಇತಿಹಾಸವಿರುವ ಸಿನಿಮಾ ಕ್ಷೇತ್ರದಲ್ಲಿ ಹಲವು ವಿಚಾರ ಅಡಗಿವೆೆ. ಚಿತ್ರಮಂದಿರಗಳ ಸಂಖ್ಯೆ ಕ್ಷೀಣಿಸಿದರು ಕೂಡ ಸಿನಿಮಾ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿವೆÉ. ಸಿನಿಮಾ ದೃಶ್ಯ ರೂಪದಲ್ಲಿರುವುದರಿಂದ ಶಾಶ್ವತವಾಗಿ ವಿಚಾರ ನಮ್ಮಲ್ಲಿ ಉಳಿಯುತ್ತವೆÉ. ಜ್ಞಾನ ಹೆಚ್ಚಳಕ್ಕೆ ಸಿನಿಮಾ ಪೂರಕವಾಗಿ ಸಹಾಯ ಮಾಡುತ್ತದೆ ಎಂದರು.
ಕೊಡಗು ವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿದ್ಯಾ ಹರೀಶ್ ಮಾತನಾಡಿದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಪ್ರಾಂಶುಪಾಲೆ ಸುಮಿತ್ರ, ಪ್ರತಿನಿಧಿ ಆರಿದ್ರ ಅಪ್ಪಯ್ಯ, ವ್ಯವಸ್ಥಾಪಕ ರವಿ ಸೇರಿದಂತೆ ದೀಕ್ಷಾ ಸಿನಿಮಾ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಇನ್ನಿತರರು ಇದ್ದರು.