ಮಡಿಕೇರಿ, ಮಾ. ೧೯: ಬಿಜೆಪಿ ರೈತ ಮೋರ್ಚಾದ ವೀರಾಜಪೇಟೆ ತಾಲೂಕು ಸಮಿತಿ ಅಧ್ಯಕ್ಷರಾಗಿ ಕಟ್ಟೇರ ಈಶ್ವರ ತಿಮ್ಮಯ್ಯ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ತೋರೆರ ವಿನು, ಕಟ್ಟೇರ ಕೆ. ಕವನ್, ಉಪಾಧ್ಯಕ್ಷರುಗಳಾಗಿ ಗುಡ್ಡಮಾಡ ಕೆ. ಸುಬ್ರಮಣಿ, ಸಿ.ಎಂ. ಉತ್ತಪ್ಪ (ಅನಿಲ್), ಕಾಟಿಮಾಡ ಶರೀನ್ ಮುತ್ತಣ್ಣ, ಎಸ್.ಎಂ. ರಾಜೇಶ್ ನೇಮಕಗೊಂಡಿದ್ದಾರೆ.

ಕಾರ್ಯದರ್ಶಿಗಳಾಗಿ ಎ.ಎಂ. ಅಚ್ಚಯ್ಯ (ನವೀನ್), ಎಂ.ಎಸ್. ದಿವಿನ್ ತಿಮ್ಮಯ್ಯ, ತೊರೀರ ಮಂದಣ್ಣ, ಕೆ.ಜೆ. ಅಯ್ಯಪ್ಪ, ಖಜಾಂಚಿಯಾಗಿ ಸಿ.ಕೆ. ಪೂವಯ್ಯ ಪ್ರದೀಪ್ ಹಾಗೂ ಸದಸ್ಯರುಗಳಾಗಿ ಎ.ಎ. ಉದಯ, ಕಾಕಮಾಡ ಜಿ. ಆದರ್ಶ್, ಐ.ಕೆ. ಗಣಪತಿ, ಕೆ.ಎಸ್. ಮಧು ಮೋಟಯ್ಯ, ಕೆ.ಎನ್. ಕಾವೇರಪ್ಪ, ಸಿ.ಎಂ. ಬೋಪಣ್ಣ, ಬಾಚಮಾಡ ಶಿಲನ್, ಗಾಂಡಗಡ ತಮ್ಮಯ್ಯ, ಮನೆಯಪಂಡ ಎಂ. ಮಹೇಶ್, ಕೆ.ಎಂ. ಸೂರಜ್, ಕೆ.ಕೆ. ನಾಚಪ್ಪ ಆಯ್ಕೆಯಾಗಿದ್ದಾರೆ ಎಂದು ರೈತ ಮೋರ್ಚಾದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ.