ಮಡಿಕೇರಿ, ಮಾ. ೧೯: ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ತಾ. ೨೯ ಮತ್ತು ೩೦ ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸವಿತಾ ಸಮಾಜ ಬಾಂಧವರಿಗೆ ಕ್ರೀಡಾಕೂಟ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಟಿ. ಮಧು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಡಿಕೇರಿ, ಮಾ. ೧೯: ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ತಾ. ೨೯ ಮತ್ತು ೩೦ ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸವಿತಾ ಸಮಾಜ ಬಾಂಧವರಿಗೆ ಕ್ರೀಡಾಕೂಟ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಟಿ. ಮಧು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಪ್ಪೆ ಜಿಗಿತ, ವಿವಿಧ ಹಂತದ ಓಟ, ಯುವಕ ಯುವತಿಯರಿಗೆ ಭಾರದ ಗುಂಡು ಎಸೆತ, ೬೦ ವರ್ಷ ಮೇಲ್ಪಟ್ಟವರಿಗೆ ವಿಶೇಷ ಕ್ರೀಡಾಕೂಟ, ಪುರುಷ, ಮಹಿಳೆಯರಿಗೆ ಹಗ್ಗಜಗ್ಗಾಟ ನಡೆಯಲಿದೆ. ತಾ. ೨೨ ರೊಳಗೆ ಹೆಸರು ನೋಂದಾಯಿಸಿಕೊಳ್ಳುವAತೆ (ಮೊಬೈಲ್ ಸಂಖ್ಯೆ ೯೪೮೦೦೦೭೦೬೪, ೭೨೦೪೬೬೪೮೪೯) ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಾಜದ ತಾಲೂಕು ಕಾರ್ಯದರ್ಶಿ ಅವಿನಾಶ್ ಬೊಟ್ಲಪ್ಪ, ಕ್ರೀಡಾ ಸಮಿತಿ ಸಂಚಾಲಕ ಮಧು ಚೆಟ್ಟಿಮಾನಿ, ಜಿಲ್ಲಾ ಉಪಾಧ್ಯಕ್ಷ ಚರಣ್, ನಿರ್ದೇಶಕರಾದ ತಿಮ್ಮಯ್ಯ, ಗಣೇಶ್ ಇದ್ದರು.