ಮಡಿಕೇರಿ, ಮಾ. ೨೦: ಮಾದಾಪುರದ ಆಶ್ರಯ ಕಾಲೋನಿಯ ಶ್ರೀ ಭಗತ್ ಸಿಂಗ್ ಯುವಕ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಮಹಾಶಿವರಾತ್ರಿಯಂದು ಏರ್ಪಡಿಸಿದ್ದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ತರಬೇತಿ ಶಾಲೆಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ನೃತ್ಯ ಸಂಯೋಜಕ ಮಹೇಶ್ ಮಾರ್ಗದರ್ಶನದಲ್ಲಿ ತಂಡದ ಕಲಾವಿದರು ಪ್ರದರ್ಶಿಸಿದ ತೈಯ್ಯಂ ಪ್ರಾಕಾರದ ನೃತ್ಯ ರೂಪಕಕ್ಕೆ ಬಹುಮಾನ ಲಭಿಸಿದೆ.