ವೀರಾಜಪೇಟೆ, ಮಾ. ೧೯: ಸುಮಾರು ೨೫ ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕು ಹೆಮ್ಮಾಡು ಭೇತ್ರಿ ಗ್ರಾಮದ ಮಾಜಿ ಸೈನಿಕ ಕುಂಬಾರರ ನಂಜಪ್ಪ (೪೭) ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಬಂಧಿತರಾದ ಆರೋಪಿ.
ಏನಿದು ಪ್ರಕರಣ?: ವೀರಾಜಪೇಟೆ ತಾಲೂಕಿನ ಬೇತ್ರಿ ಹೆಮ್ಮಾಡು ಗ್ರಾಮದಲ್ಲಿ ೧೯೯೬ರ ಆಗಸ್ಟ್ ತಿಂಗಳಲ್ಲಿ ಗೌರಿ-ಗಣೇಶ ಜಾತ್ರೆ ಉತ್ಸವದಲ್ಲಿ ಕ್ಷÄಲ್ಲಕ ಕಾರಣಕ್ಕೆ ಐವರು ಸಹೋದರರು ಮತ್ತು ಅಲ್ಲಿನ ಅಂಗಡಿ ಮಾಲೀಕನ ಮಧ್ಯೆ ಗಲಭೆ ಉಂಟಾಗಿ ಗಲಭೆಯು ಕೊಲೆಯಲ್ಲಿ ಅಂತ್ಯಕಾಣುತ್ತದೆ. ಉತ್ಸವದ ಸಂದರ್ಭದಲ್ಲಿ ಕುಂಬಾರರ ಕುಟುಂಬದ ಸಹೋದರರಾದ, ಪೂಣಚ್ಚ, ಬಿದ್ದಪ್ಪ, ಕಾಳಪ್ಪ, ಕುಶಾಲಪ್ಪ ಮತ್ತು ನಂಜಪ್ಪ ಹಾಗೂ ಹೆಮ್ಮಾಡುವಿನಲ್ಲಿ ದಿನಸಿ ಅಂಗಡಿ ನಡೆಸಿಕೊಂಡಿದ್ದ ತೊರೇರ ನಂಜಪ್ಪ ಅವರುಗಳ ನಡುವೆ ಜಗಳವಾಗಿದೆ. ಸಹೋದರರು ಕೈಯಲ್ಲಿದ್ದ ಮಚ್ಚಿನಿಂದ ನಂಜಪ್ಪ ಅವರ ಕುತ್ತಿಗೆ ಭಾಗಕ್ಕೆ ಕಡಿದು ಕೊಲೆಗೈಯುತ್ತಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿತರ ಮೇಲೆ ಮೃತರ ಸಹೋದರÀ ತೊರೇರ ಪೂಣಚ್ಚ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆರೋಪಿತರ ಮೇಲೆ ೩೦೨, ೩೦೭ ರೆ/ವಿ ೩೪ ಐ.ಪಿ.ಸಿ ಕಾಯ್ದೆ ಅನ್ವಯ ಕೊಲೆ ಮೊಕದ್ದಮೆ ದಾಖಲಾಗುತ್ತದೆ. ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ ಮೇರೆಗೆ ಶಿಕ್ಷೆ ವಿಧಿಸಲಾಗುತ್ತದೆ. ನಂಜಪ್ಪ ಪೊಲೀಸರಿಗೆ ಸಿಗದೆ ತಲೆಮರೆಸಿಕೊಳ್ಳುತ್ತಾರೆ. ನ್ಯಾಯಾಲಯವು ಪ್ರಕರಣವನ್ನು ಆರೋಪಿಯ ಪತ್ತೆ ವಿಳಂಬವಾದ ಕಾರಣದಿಂದಾಗಿ ‘ಲಾಂಗ್ ಪೆಂಡಿAಗ್ ಕೇಸ್’ ಎಂಬುದಾಗಿ ನಮೂದಿಸುತ್ತದೆ.
ಮತ್ತೆ ಶುರುವಾದ ಕಾರ್ಯಾಚರಣೆ
ಇತ್ತ ಆರೋಪಿ ನಂಜಪ್ಪ ಸೇನೆಯಲ್ಲಿ ಮುಂದುವರೆದು ಸ್ವಯಂ ಪ್ರೇರಿತ ನಿವೃತ್ತಿ ಪಡೆದು ಬೆಂಗಳೂರಿನ ಸೈನಿಕ ಕಲ್ಯಾಣ ನಿಧಿ ಇಲಾಖೆಯಲ್ಲಿ ಚಾಲಕನಾಗಿ ಸೇವೆಯಲ್ಲಿ ಮುಂದುವರೆಯುತ್ತಾರೆ. ಈ ನಡುವೆ ಪ್ರಕರಣದ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡವನ್ನು ರಚನೆ ಮಾಡಿ ಕೊಲೆ ಪ್ರಕರಣದ ಆರೋಪಿಯ ಪತ್ತೆ ಕಾರ್ಯ ಚುರುಕುಗೊಳಿಸಲಾಗುತ್ತದೆ. ಎರಡು ವರ್ಷಗಳಿಂದ ಆರೋಪಿಯ ಬೆನ್ನು ಹತ್ತಿದ್ದ ಪೊಲೀಸರ ತಂಡಕ್ಕೆ ಆರೋಪಿಯು ಬೆಂಗಳೂರಿನಲ್ಲಿ ನೆಲೆಸಿರುವುದಾಗಿ ದೊರೆತ ಮಾಹಿತಿಯ ಆಧಾರದ ಮೇಲೆ ಶೋಧ ನಡೆಸಿದ್ದಾರೆ. ಬೆಂಗಳೂರು ಪೊಲೀಸರ ನೆರವಿನಿಂದ ನಂಜಪ್ಪನನ್ನು ಬೆಂಗಳೂರಿನ ಆಶೋಕ ನಗರದಲ್ಲಿ ಬಂಧಿಸುವಲ್ಲ್ಲಿ ಯಶಸ್ವಿಯಾಗುತ್ತಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿಡಲಾಗಿದೆ..
ರಜೆಯಲ್ಲಿ ಬಂದಿದ್ದಾಗ ಘಟನೆ
ಇದೀಗ ಬಂಧಿಯಾಗಿರುವ ನಂಜಪ್ಪ ೧೯೯೪ರಲ್ಲಿ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದರು. ಎರಡು ವರ್ಷ ಕಳೆದು ರಜೆಯಲ್ಲಿ ಮನೆಗೆ ಆಗಮಿಸಿದ್ದ ವೇಳೆಯಲ್ಲಿ ಉತ್ಸವ ಸಂದರ್ಭ ಭೀಕರ ಘಟನೆ ಸಂಭವಿಸಿತ್ತು. ಪ್ರಕರಣದ ಇನ್ನುಳಿದ ಆರೋಪಿಗಳ ಪೈಕಿ ಪೂಣಚ್ಚ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೆ, ಬಿದ್ದಪ್ಪ ಮೃತಪಟ್ಟಿದ್ದಾರೆ. ಕಾಳಪ್ಪ ಹಾಗೂ ಕುಶಾಲಪ್ಪ ವ್ಯಾಜ್ಯದಿಂದ ಖುಲಾಸೆಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರ ಮಾರ್ಗದರ್ಶನದಂತೆ, ವೀರಾಜಪೇಟೆ ಉಪವಿಭಾಗ ಡಿ.ವೈ.ಎಸ್ಪಿ ಸಿ.ಟಿ. ಜಯಕುಮಾರ್ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್ ಶ್ರೀಧರ್, ಗ್ರಾಮಾಂತರ ಠಾಣಾಧಿಕಾರಿ ಸಿದ್ದಲಿಂಗ ಭಿ. ಬಾನಸೆ, ಗೋಣಿಕೊಪ್ಪಲು ಠಾಣೆಯ ಎ.ಎಸ್.ಐ. ಸುಬ್ರಮಣಿ, ಸಿಬ್ಬಂದಿಗಳಾದ ರಾಮಪ್ಪ, ಬಿ.ಎಂ. ಚಂದ್ರಶೇಖರ್, ಎಂ. ನೆಹರುಕುಮಾರ್, ಸಿ.ಡಿ.ಆರ್. ವಿಭಾಗದ ರಾಜೇಶ್ ಮತ್ತು ಗಿರೀಶ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ