ಕಣಿವೆ, ಮಾ. ೧೯: ಕುಶಾಲನಗರದ ರಾಕಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಸ್ಥಳೀಯ ಶರತ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಕಪ್ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಿ.ಎಸ್. ಹರೀಶ್ ಹಾಗೂ ಅರುಣ ಜೋಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ಟ್ರೋಫಿ ತಮ್ಮದಾಗಿಸಿಕೊಂಡರೆ, ರಾಜು ಹಾಗೂ ಮುರುಳಿ ಜೋಡಿ ದ್ವಿತೀಯ ಸ್ಥಾನ ಗಳಿಸಿತು. ಪಂದ್ಯಾವಳಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಅಬ್ದುಲ್ ಲತೀಫ್ ಉದ್ಘಾಟಿಸಿದರು. ಪಂದ್ಯಾವಳಿಯಲ್ಲಿ ೨೫ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿದ್ದವು.

ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಆಟಗಾರರಾದ ಗಿರಿ, ಪ್ರಸನ್ನ, ರಂಜನ್, ಹರ್ಷ, ಶಶಿ, ಲೋಹಿತ್, ಮಹೇಂದ್ರ, ಪ್ರಸಾದ್, ಮೊದಲಾದವರಿದ್ದರು.