ಕೂಡಿಗೆ, ಮಾ.೨೦: ಕೂಡುಮಂಗಳೂರು ಗ್ರಾಮದ ಪೂರ್ಣಚಂದ್ರ ಬಡಾವಣೆಯಲ್ಲಿರುವ ಶ್ರೀ ಮಾತಾ ದಂಡಿನಮ್ಮ ಚೌಡೇಶ್ವರಿ ದೇವಸ್ಥಾನ ಸಮಿತಿಯ ವತಿಯಿಂದ ಮೂರನೇ ವರ್ಷದ ದಂಡಿನ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವ ಆಚರಣೆಯು ತಾ. ೨೦ ರಿಂದ ಆರಂಭಗೊAಡಿದ್ದು, ತಾ. ೨೧ ರಂದು ಬೆಳಿಗ್ಗೆ ಗಣಪತಿ ಹೋಮ ದುರ್ಗಾಹೋಮ ನವಕಳಸ ಪಂಚಾಮೃತ ಅಭಿಷೇಕ , ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ ೬.೩೦ ಕ್ಕೆ ದೇವಿಯ ವಿಗ್ರಹವನ್ನು ದೀಪಾಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.