
ಗೋಣಿಕೊಪ್ಪಲು, ಮಾ ೧೯: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಘಟನೆಗೆ ಸಂಬAಧಿಸಿದAತೆ ಆಕ್ರೋಶ - ಪ್ರತಿಭಟನೆಗಳು ಮುಂದುವರಿಯುತ್ತಿರುವ ಬೆಳವಣಿಗೆಯ ನಡುವೆ ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಅರಣ್ಯದಂಚಿನ ಪ್ರದೇಶದಲ್ಲಿ ಹುಲಿಯೊಂದರ ಕಳೇಬರ ಪತ್ತೆಯಾಗಿದೆ.ಅಲ್ಲಿನ ಆನೆ ಕಂದಕದಲ್ಲಿ ಕೊಳೆತ ಸ್ಥಿತಿಯಲ್ಲಿ ಇದು ಗೋಚರವಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಹಲವು ಜಾನುವಾರುಗಳು ಸೇರಿದಂತೆ ಮೂವರನ್ನು ಬಲಿತೆಗೆದುಕೊಂಡಿದ್ದ ಹುಲಿಯೇ ಇದು (U೨೮೫) ಎಂಬದಾಗಿ ಅರಣ್ಯ ಇಲಾಖೆಯ ತನಿಖೆ ಹಾಗೂ ಮರಣೋತ್ತರ ಪರೀಕ್ಷೆ ಮೂಲಕ ದೃಢಪಟ್ಟಿದೆ ಎನ್ನಲಾಗಿದೆ.ಹುಲಿ ಆನೆ ಕಂದಕದಲ್ಲಿ ಸತ್ತು ಬಿದ್ದಿರುವ ವಿಚಾರ ಇಂದು ಅರಣ್ಯ ಸಿಬ್ಬಂದಿಗಳು ಅರಣ್ಯದಂಚಿನಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭ ತಿಳಿದು ಬಂದಿದೆ. ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.ಸ್ಥಳದಲ್ಲೇ ಹುಲಿಯ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಈ ವೇಳೆ ಇದು ಈ ಹಿಂದೆ ಸೆರೆ ಹಿಡಿಯಲು ಗುರುತಿಸಲ್ಪಟ್ಟಿದ್ದ U೨೮೫ ಸಂಖ್ಯೆಯ ಹುಲಿ ಎಂಬದು ತಿಳಿದು ಬಂದಿದೆ. ಮಾರ್ಚ್ ೮ ರಂದು ರಾತ್ರಿ ಬೆಳ್ಳೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಕೊಂದಿದ್ದ ಪ್ರದೇಶ ವ್ಯಾಪ್ತಿಯಲ್ಲಿ ನಡೆಸಲಾಗಿದ್ದ ಕಾರ್ಯಾಚರಣೆ ಸಂದರ್ಭ ಹುಲಿಗೆ ಗುಂಡು ಹಾರಿಸಲಾಗಿತ್ತು. ಆದರೆ ಹುಲಿ ಸ್ಥಳದಿಂದ ಕಾಲ್ಕಿತ್ತಿತ್ತು. ಇದಾದ ಬಳಿ ತಾ. ೧೧ ರಂದು ಈ ಹುಲಿ ನಾಲ್ಕೇರಿಯಲ್ಲಿ ರಾಮಚಂದ್ರ ಎಂಬವರ ಹಸುವನ್ನು ಕೊಂದಿದ್ದು, ಆ ವ್ಯಾಪ್ತಿಯಲ್ಲಿ ಕ್ಯಾಮರಾದಲ್ಲಿ ಇದರ ಚಿತ್ರ ಸೆರೆಯಾಗಿತ್ತೆನ್ನಲಾಗಿದೆ. ಇದಾದ ಬಳಿಕ ಇದರ ಜಾಡು ಕಂಡು ಬಂದಿರಲಿಲ್ಲ. ಇದೀಗ ಲಕ್ಕುಂದ ಆನೆ ಕಂದಕದಲ್ಲಿ ಮೃತದೇಹ ಕಂಡು ಬಂದಿದೆ. ಮೃತದೇಹದ ಪರೀಕ್ಷೆ ನಡೆಸಿದ ಸಂದರ್ಭ ದೇಹದ ಎದೆಭಾಗದಲ್ಲಿ ಚಿಲ್ಲುಗಳು ಪತ್ತೆಯಾಗಿವೆ. ಹುಲಿಯ ಮೂರು ಹಲ್ಲುಗಳು ಸವೆದು ಹೋಗಿದ್ದು, ಇದು ಒಂದು ಹಲ್ಲಿನ ಸಹಾಯದಿಂದ ಆಹಾರ ತಿನ್ನುತಿತ್ತು ಎಂದು ಹೇಳಲಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮುಂದೆ ಹುಲಿಯ ಮೃತ ದೇಹವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಗಿದೆ. ದುರ್ನಾತ ಬೀರುತ್ತಿದ್ದರಿಂದ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಹುಲಿಯ ಕಳೇಬರವನ್ನು ಸುಡಲಾಗಿದೆ. ಅರಣ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಹುಲಿಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದ್ದರು. ಘಟನಾ ಸ್ಥಳಕ್ಕೆ ತೆರಳಿದ ರೈತ ಸಂಘದ ಪದಾಧಿಕಾರಿಗಳು ಹುಲಿಯ ಮೃತ ದೇಹವನ್ನು ವೀಕ್ಷಣೆ ಮಾಡಿದರು. ದ.ಕೊಡಗಿನ ಬೆಳ್ಳೂರು, ಟಿ.ಶೆಟ್ಟಿಗೇರಿ, ಮುಂತಾದ ಪ್ರದೇಶದಲ್ಲಿ ಹುಲಿ ಹಾವಳಿಯಿಂದ ರೈತರ ಅನೇಕ ಜಾನುವಾರುಗಳು ಸೇರಿದಂತೆ ಮೂರು ಮಂದಿ ಮಾನವರ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದ ರೊಚ್ಚಿಗೆದ್ದ ರೈತ ಮುಖಂಡರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು ಇನ್ನೂ ಪ್ರತಿಭಟನೆ ಮುಂದುವರಿದಿದೆ.
(ಮೊದಲ ಪುಟದಿಂದ) ಮಾ.೮ರಂದು ಮುಂಜಾನೆ ನಂಜನಗೂಡಿನ ಕೂಲಿ ಕಾರ್ಮಿಕ ಕೆಂಚಶೆಟ್ಟಿ ಹಾಗೂ ಪುಟ್ಟ ಬಾಲಕ ರಾಮಸ್ವಾಮಿ ಎಂಬವರ ಮೇಲೆ ಹುಲಿಯು ಮುಂಜಾನೆಯ ವೇಳೆಯಲ್ಲಿ ದಾಳಿ ನಡೆಸಿ ೮ ವರ್ಷ ಪ್ರಾಯದ ರಂಗಸ್ವಾಮಿ ಎಂಬ ಬಾಲಕನನ್ನು ಕೊಂದು ಹಾಕಿತ್ತು. ಕೆಂಚಶೆಟ್ಟಿ ಎಂಬವರ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಈ ವಿಷಯದಲ್ಲಿ ಬೆಳ್ಳೂರು ಜಂಕ್ಷನ್ನಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಖಂಡಿಸಿ ಹಾಗೂ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ್ದರು. ಅಲ್ಲದೆ ಹುಲಿಯ ಕಾರ್ಯಾಚರಣೆಗೆ ತೆರಳಬೇಕಾದ ಸಾಕಾನೆಗಳನ್ನು ತಡೆದು ತಮ್ಮ ಅಕ್ರೋಶ ಹೊರಹಾಕಿ ಸಿಸಿಎಫ್ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಆಗಿನ ಸಿಸಿಎಫ್ ಹೀರಾಲಾಲ್ ಸ್ಥಳಕ್ಕೆ ಆಗಮಿಸಿ ಹುಲಿಯ ಕಾರ್ಯಾಚರಣೆಗೆ ತಕ್ಷಣದಿಂದಲೇ ಕ್ರಮ ಕೈಗೊಳ್ಳುವುದಾಗಿ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಅಂದಿನ ರಾತ್ರಿಯಿಂದ ಬೆಳ್ಳೂರು ಜಂಕ್ಷನ್ನಲ್ಲಿ ಅಹೋರಾತ್ರಿ ಪ್ರತಿಭಟನೆ ಆರಂಭವಾಗಿದೆ.
ಹುಲಿಯು ಮೃತಪಟ್ಟ ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಸಿಸಿಎಫ್ ತಖ್ತ್ಸಿಂಗ್ ರಾಣಾವತ್, ಡಿಸಿಎಫ್ಗಳಾದ ಪ್ರಭಾಕರನ್, ಚಕ್ರಪಾಣಿ, ಮಹೇಶ್ ಕುಮಾರ್, ಶಿವರಾಮ್ ಭಟ್, ಎಸಿಎಫ್ ಗೋಪಾಲ್, ಉತ್ತಪ್ಪ, ರೋಶ್ನಿ, ದಯಾನಂದ್ ಸೇರಿದಂತೆ ಆರ್ಎಫ್ಗಳಾದ ಅಶೋಕ್ ಹುನಗುಂದ, ವೀರೇಂದ್ರ ಮರಿಬಸವಣ್ಣನವರ್, ರಾಜಪ್ಪ ಮುಂತಾದವರು ಹಾಜರಿದ್ದರು.
ನರಭಕ್ಷಕ ಹುಲಿ ಎಂದು ನಿರ್ಧರಿಸಲಾಗಿದ್ದ ಹುಲಿಯ ಜಾಡು ಅರಸಿ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಸಿಬ್ಬಂದಿಗಳ ಮೇಲೆ ಹುಲಿಯು ದಾಳಿ ನಡೆಸುವ ಮುನ್ಸೂಚನೆ ಕಂಡು ಬಂದ ಹಿನ್ನೆಲೆಯಲ್ಲಿ ತಮ್ಮ ಪ್ರಾಣ ರಕ್ಷಣೆಗಾಗಿ ಮಾ.೮ರಂದು ಬೆಳ್ಳೂರು ಬಳಿ ಗುಂಡು ಹಾರಿಸಿದ್ದರು. ಈ ವೇಳೆ ಕೆಲವು ಗುಂಡುಗಳು ಇದೀಗ ಮೃತ ಪಟ್ಟಿರುವ ಹುಲಿಯ ಶರೀರದಲ್ಲಿ ಗೋಚರಿಸಿವೆ. ೧೨ ವರ್ಷ ಪ್ರಾಯದ ಗಂಡು ಹುಲಿಯು ನಾಲ್ಕು ದಿನಗಳ ಹಿಂದೆ ತೀರಾ ನಿತ್ರಾಣಗೊಂಡು ಸಾವನ್ನಪ್ಪಿದೆ. ಹೊಟ್ಟೆ ಹಾಗೂ ಎದೆಯ ಭಾಗದಲ್ಲಿ ಗುಂಡಿನ ಚೂರುಗಳು ಮರಣೋತ್ತರ ಪರೀಕ್ಷೆಯ ವೇಳೆ ಲಭ್ಯವಾಗಿದೆ. ಅರಣ್ಯ ಇಲಾಖೆಯ ಡಾ.ಸನತ್ ಹಾಗೂ ಡಾ.ಮುಜಿಬ್ರವರು ಎಸ್ಒಪಿ ನಿಯಮಾನುಸಾರ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯಕ್ರಿಯೆ ಮಾಡಲಾಗಿದೆ. ಮೂರು ಹಲ್ಲುಗಳು ಸಂಪೂರ್ಣ ಸವೆದಿದ್ದು ಒಂದು ಹಲ್ಲಿನಲ್ಲಿ ಈ ಹುಲಿಯು ಬೇಟೆಯಾಡುತ್ತಿತ್ತು.
ಸಂಘರ್ಷ
ಹುಲಿಯು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರೈತ ಸಂಘದ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್, ಮುಂದಾಳತ್ವದಲ್ಲಿ ಪ್ರತಿಭಟನೆಯ ಸ್ಥಳವಾದ ಬೆಳ್ಳೂರು ಜಂಕ್ಷನ್ನಿAದ ಹಲವು ಪದಾಧಿಕಾರಿಗಳು ಹುಲಿಯನ್ನು ವೀಕ್ಷಿಸಲು ತೆರಳಿದರು. ನಾಗರಹೊಳೆಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೃತಪಟ್ಟ ಹುಲಿಯನ್ನು ವೀಕ್ಷಿಸಲು ಅರಣ್ಯ ಅಧಿಕಾರಿಗಳು ಅವಕಾಶ ಕಲ್ಪಿಸಿದರು. ನಂತರ ಸ್ಥಳದಲ್ಲಿದ್ದ ಸಿಸಿಎಫ್ ತಖ್ತ್ಸಿಂಗ್ ರಾಣಾವತ್ರವರನ್ನು ಮುಂದಿನ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಬಯಸಿದರು.
ಈ ವೇಳೆ ಮುಂದಿನ ಕಾರ್ಯಾಚರಣೆಯ ವಿವರವನ್ನು ನೀಡಲು ಸಿಸಿಎಫ್ ತಖ್ತ್ಸಿಂಗ್ ರಾಣಾವತ್ರವರು ಹಿಂದೇಟು ಹಾಕಿದರು. ಈ ವೇಳೆ ಸ್ಥಳದಲ್ಲಿದ್ದ ಪುಚ್ಚಿಮಾಡ ಅಶೋಕ್ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಬೇಕು. ರೈತರ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸದಂತೆ ತಮ್ಮ ಕಾರ್ಯಾ ಚರಣೆ ಮುಂದುವರೆಸಬೇಕೆAದು ಮನವಿ ಮಾಡಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ಸಿಸಿಎಫ್ ತಖ್ತ್ಸಿಂಗ್ ರಾಣಾವತ್ ಕಾರ್ಯಾಚರಣೆಯನ್ನು ತಾವೇ ಮುಂದುವರೆಸಿ ಎಂದು ಉತ್ತರ ನೀಡಿದ್ದು, ಇದರಿಂದ ಸ್ಥಳದಲ್ಲಿದ್ದ ರೈತ ಮುಖಂಡರು ಆಕ್ರೋಶಗೊಂಡರು. ಎಸಿಎಫ್ ಗೋಪಾಲ್ರವರು ಮಧ್ಯೆ ಪ್ರವೇಶ ಮಾಡಿ ಮಾತು ಮುಂದುವರೆಸದAತೆ ಮನವಿ ಮಾಡಿದರು. ಇದರಿಂದ ಅಸಮಾಧಾನ ಗೊಂಡ ರೈತರು ಸ್ಥಳದಿಂದ ಹೊರ ನಡೆದರು. ಈ ವೇಳೆ ರೈತ ಸಂಘದ ಪದಾಧಿಕಾರಿಗಳಾದ ಪುಚ್ಚಿಮಾಡ ಸುನೀಲ್, ಇಟ್ಟಿರ ವಿಷ್ಣು, ಬಿಜೆಪಿ ಮುಖಂಡ ಕಟ್ಟೆರ ಈಶ್ವರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
.jpg)