ಮಡಿಕೇರಿ,ಮಾ. ೨೦: ಮಡಿಕೇರಿ ನಗರಕ್ಕೆ ಕಗ್ಗಂಟಾಗಿರುವ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕಾಲ ಸನ್ನಿಹಿತವಾಗುತ್ತಿರುವಂತೆ ಕಾಣಬರುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ತಲೆದೋರಿರುವ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗದೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಕಸ ವಿಲೇವಾರಿ ಮಾಡಲು ಸೂಕ್ತ ಜಾಗ ದೊರಕದೆ ಪರದಾಡುವಂತಾಗಿತ್ತು. ಪ್ರಸ್ತುತ ವಿಲೇವಾರಿ ಮಾಡಲಾಗುತ್ತಿರುವ ಸ್ಥಳವು ಬೆಟ್ಟದ ಮೇಲಿದ್ದು, ಸಮರ್ಪಕವಾಗಿ ಕಸ ವಿಂಗಡಣೆಯಾಗದೆ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಇದೀಗ ಜನವಸತಿ ಪ್ರದೇಶದಿಂದದೂರವಿರುವ, ಕಸ ವಿಲೇವಾರಿಗೆ ಸೂಕ್ತವಾದ ವಿಶಾಲವಾದ ಜಾಗ ಗುರುತಿಸಲಾಗಿದ್ದು, ಸರ್ವೆ ಮಾಡಿ ಗಡಿ ಗುರುತು ಮಾಡಲಾಗಿದೆ.ಮಡಿಕೇರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದ ಕಸ, ತ್ಯಾಜ್ಯ ವಿಲೇವಾರಿ ಸಮಸ್ಯೆ ಕಳೆದ ೨೦೦೫ರಿಂದಲೇ ಮುಂದುವರಿದಿದೆ. ಪ್ರಸ್ತುತ ಕಸ ಸುರಿಯಲಾಗುತ್ತಿರುವ ಸ್ಟೋನ್ ಹಿಲ್ ಬಳಿಯ ಪ್ರದೇಶ ಬೆಟ್ಟ ಪ್ರದೇಶವಾಗಿದೆ. ಇಲ್ಲಿ ಆರು ಎಕರೆ ಜಾಗ ಮೀಸಲಿರಿಸಲಾಗಿದ್ದರೂ ಕೇವಲ ಒಂದೂವರೆ ಎಕರೆ ಮಾತ್ರ ಬಳಕೆಗೆ ಯೋಗ್ಯವಾಗಿದೆ. ಈ ಕಡಿಮೆ ವಿಸ್ತೀರ್ಣದ ಜಾಗದಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದ್ದು, ಇದೀಗ ಈ ಕಸದ ಗುಡ್ಡವೇ ಎಲ್ಲಕ್ಕಿಂತ ದೊಡ್ಡ ಬೆಟ್ಟವಾಗಿ ಎದ್ದು ನಿಂತಿದೆ. ಇಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ ಯಲ್ಲದೆ ಸಮರ್ಪಕವಾಗಿ ವಿಂಗಡಣೆಯಾಗುತ್ತಿಲ್ಲ. ಹಾಗಾಗಿ ಕಸದ ರಾಶಿ ಬೆಳೆದು ನಾರುತ್ತಿದೆ.ಮಳೆಗಾಲದಲ್ಲಿ ಕೊಳೆತ ಕಸದ ಮಲಿನ ನೀರು ಈ ಪ್ರದೇಶದ ಸನಿಹದಲ್ಲಿರುವ ಸುಬ್ರಮಣ್ಯನಗರ, ರೈಫಲ್ ರೇಂಜ್ ಪ್ರದೇಶಕ್ಕೆ ಹರಿಯುತ್ತದೆ. ಮತ್ತೆ ಬೇಸಿಗೆ ಬಂದಾಗ ಕಸದ ರಾಶಿಯಲ್ಲಿ ಉತ್ಪತ್ತಿಯಾಗುವ ನೊಣಗಳು ಹಾಗೂ ದುರ್ವಾಸನೆ ಕೆಳಭಾಗದ ಎರಡು ಪ್ರದೇಶ ಸೇರಿದಂತೆ ಕನ್ನಿಕಾ ಬಡಾವಣೆ, ವಿದ್ಯಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಿದಾಡುತ್ತವೆ. ಇದರಿಂದಾಗಿ ರೋಸಿಹೋದ ಜನತೆ ಸಂಬAಧಿಸಿದ ಆಡಳಿತ, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆಹೋದರು. ಅಲ್ಲಿಯೂ ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ಕೊನೆಗೆ ನಾಲ್ಕು ಬಡಾವಣೆಗಳ ನಿವಾಸಿಗಳು ಸೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಿದಾಡುತ್ತವೆ. ಇದರಿಂದಾಗಿ ರೋಸಿಹೋದ ಜನತೆ ಸಂಬAಧಿಸಿದ ಆಡಳಿತ, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆಹೋದರು. ಅಲ್ಲಿಯೂ ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ಕೊನೆಗೆ ನಾಲ್ಕು ಬಡಾವಣೆಗಳ ನಿವಾಸಿಗಳು ಸೇರಿ (ಮೊದಲ ಪುಟದಿಂದ) ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಕಂದಾಯ ಇಲಾಖೆ, ನಗರಸಭೆ ವತಿಯಿಂದ ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಹತ್ತು ಎಕರೆ ಜಾಗ ಗುರುತಿಸಿ, ಸರ್ವೆ ಮಾಡಿ ಗಡಿ ಗುರುತು ಮಾಡಲಾಗಿದೆ.

ಮೊಣ್ಣಂಗೇರಿಯಲ್ಲಿ ಜಾಗ

ಕಸ ವಿಲೇವಾರಿಗೆ ಎಲ್ಲಿಯೂ ಜಾಗ ಸಿಗದಿದ್ದಾಗ ಎಸ್. ಆರ್. ವಿ. ಕೆ. ಸಂಘದವರು ಮಡಿಕೇರಿ ಹೊರವಲಯದ ಎರಡನೇ ಮೊಣ್ಣಂಗೇರಿ ಗ್ರಾಮದ ಸ.ನಂ.೨೦/೧ರಲ್ಲಿ ಜನವಸತಿ ಇಲ್ಲದ ಖಾಲಿ ಸರಕಾರಿ ಜಾಗ ಇರುವ ಬಗ್ಗೆ ನಗರಸಭೆ ಹಾಗೂ ಕಂದಾಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ನಂತರದಲ್ಲಿ ಮಡಿಕೇರಿ ತಹಶೀಲ್ದಾರರು, ನಗರಸಭೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಜಾಗ ಪರಿಶೀಲನೆ ಮಾಡಿ ಸ.ನಂ.೨೦/೧ರಲ್ಲಿನ ಖಾಲಿ ಜಾಗದ ಪೈಕಿ ಹತ್ತು ಎಕರೆ ಜಾಗವನ್ನು ಸರ್ವೆಯಿಂದ ವಿಂಗಡಿಸಿ ಮಡಿಕೇರಿ ನಗರಸಭೆ ವ್ಯಾಪ್ತಿಯ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುವ ಉದ್ದೇಶಕ್ಕೆ ನಗರಸಭೆ ಪೌರಾಯುಕ್ತರ ಹೆಸರಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ೭೧ರನ್ವಯ ಕಾಯ್ದಿರಿಸಿ ತಾ.೨೮.೧೨.೨೦೨೦ರಂದು ಆದೇಶಿಸಿದೆ. ಈ ಜಾಗವನ್ನು ಸ್ವಾಧೀನಪಡಿಸಿಕೊಂಡು ಯಾವ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸುವಂತೆ ಷರತ್ತು ವಿಧಿಸಿದೆ. ಜಾಗ ಸ್ವಾಧೀನಪಡಿಸಿಕೊಂಡ ನಗರಸಭೆ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಮಾಡಿ ಗಡಿ ಗುರುತಿಸಿ ಗುರುತು ಕಲ್ಲುಗಳನ್ನು ನೆಟ್ಟಿದೆ.

ಮಾಲಿನ್ಯ ಮಂಡಳಿ ಪರಿಶೀಲನೆ

ವೈಜ್ಞಾನಿಕವಾಗಿ ಕಸವಿಲೇವಾರಿಗೆ ಕ್ರಮ ವಹಿಸುವಂತೆ ನ್ಯಾಯಾಲಯವು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಸ್ಥಳ ಪರಿಶೀಲನೆ ಮಾಡಲಾಗಿದ್ದು, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವದಾಗಿ ಮಂಡಳಿಯ ಅಧಿಕಾರಿ ಸುಧಾ ತಿಳಿಸಿದ್ದಾರೆ. ಪ್ರಸ್ತುತ ಕಸ ವಿಲೇವಾರಿ ಮಾಡುತ್ತಿರುವ ಪ್ರದೇಶ ಎತ್ತರ ಪ್ರದೇಶವಾಗಿದ್ದು, ಸುತ್ತಲೂ ಇಳಿಜಾರು ಪ್ರದೇಶವಿದ್ದು, ಕಸ, ತ್ಯಾಜ್ಯಗಳು ಕೆಳಭಾಗದ ಪ್ರದೇಶಕ್ಕೆ ಸೇರದಂತೆ ತಡೆಗೋಡೆ ನಿರ್ಮಿಸಿರುವದಿಲ್ಲ. ರಸ್ತೆ ಬದಿಯಲ್ಲಿ ನಿರ್ಮಿಸುತ್ತಿರುವ ತಡೆಗೋಡೆ ಅಪೂರ್ಣವಾಗಿದೆ. ಒಟ್ಟಾರೆ ಇರುವ ಆರು ಎಕರೆ ಜಾಗದಲ್ಲಿ ಒಂದೂವರೆ ಎಕರೆ ಮಾತ್ರ ಬಳಸುತ್ತಿದ್ದು, ಉಳಿದ ಪ್ರದೇಶವು ಇಳಿಜಾರು ಪ್ರದೇಶವಾಗಿರುತ್ತದೆ, ಅತ್ಯಂತ ಸಮೀಪದಲ್ಲಿರುವ ಸುಬ್ರಮಣ್ಯ ನಗರದ ಪ್ರದೇಶಕ್ಕೆ ಘನ ತ್ಯಾಜ್ಯ ವಸ್ತುಗಳು ಜಾರದಂತೆ ಕ್ರಮ ಕೈಗೊಳ್ಳಬೇಕಾಗಿರುತ್ತದೆ ಎಂದು ಈ ಹಿಂದೆಯೇ ಮಂಡಳಿ ಒಂದು ವರದಿ ಸಲ್ಲಿಸಿದೆ.

ಕೆಲವರ ಆಕ್ಷೇಪ

ಪ್ರಸ್ತುತ ಮೊಣ್ಣಂಗೇರಿಯಲ್ಲಿ ಗುರುತಿಸಲಾಗಿರುವ ಜಾಗದ ಸನಿಹ ಮನೆಗಳಿದ್ದು, ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸ್ಥಳ ಪರಿಶೀಲನೆ ಮಾಡಲೆಂದು ತೆರಳಿದ್ದ ಸಂದರ್ಭ ಗುರುತು ಮಾಡಿರುವ ಹತ್ತು ಎಕರೆ ಪ್ರದೇಶದ ಸುತ್ತಮುತ್ತ ಒಂದು ಕಿ.ಮೀ. ವ್ಯಾಪ್ತಿವರೆಗೂ ಎಲ್ಲಿಯೂ ಮನೆಗಳಾಗಲೀ, ಜಲಮೂಲವಾಗಲೀ ಕಂಡುಬAದಿರುವದಿಲ್ಲ.

ಘನ ತ್ಯಾಜ್ಯ ವಸ್ತು ವಿಲೇವಾರಿ ಸ್ಥಳದ ಸುತ್ತಲಿನ ೫೦೦ಮೀ. ಪ್ರದೇಶವನ್ನು ‘ಬಫರ್ ಝೋನ್’ ಎಂದು ಘೋಷಣೆ ಮಾಡಿ ಆ ಪ್ರದೇಶದಲ್ಲಿ ಯಾವದೇ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ಬಂಧಿಸಬೇಕಾಗುತ್ತದೆ. ಆದರೆ, ಇಲ್ಲಿ ‘ಬಫರ್ ಝೋನ್’ ಹೊರತುಪಡಿಸಿಯೂ ಇನ್ನೂ ಜಾಗ ಉಳಿಕೆಯಾಗುತ್ತದೆ. ಜಾಗದ ಒಂದು ಕಡೆಯಲ್ಲಿ ಕಾಡು ಇದ್ದರೆ, ಇನ್ನೊಂದು ಕಡೆಯಲ್ಲಿ ತೋಟಗಳಿವೆ. ಅದೂ ಕೂಡ ದೂರದಲ್ಲಿದೆ. ಈ ಬಗ್ಗೆ ಮಡಿಕೇರಿ ನಗರಸಭಾ ಆಯುಕ್ತರು ಕೂಡಾ ಎಸ್. ಡಬ್ಲೂö್ಯ. ಎಂ. ನಿಯಮ೨೦೧೬ ಮತ್ತು ಕೆ. ಎಸ್. ಪಿ.ಸಿ.ಬಿ. ಮಾರ್ಗಸೂಚಿಯಂತೆ ಪರಿಶೀಲನೆ ಮಾಡಿ ಜಾಗದ ಸನಿಹ ಯಾವದೇ ಜನವಸತಿ ಹಾಗೂ ಜಲ ಮೂಲಗಳಿರುವದಿಲ್ಲವೆಂದು ವರದಿ ಸಲ್ಲಿಸಿದ್ದಾರೆ. ಹಾಗಾಗಿ ಇಲ್ಲಿ ಯಾರಿಗೂ ತೊಂದರೆಗಳಾಗುವ ಸಾಧ್ಯತೆಗಳು ಕಡಿಮೆ. ವೈಜ್ಞಾನಿಕವಾಗಿ ಕಸ ತ್ಯಾಜ್ಯ ವಿಂಗಡಣೆ ಮಾಡಿ ಗೊಬ್ಬರ ತಯಾರಿಸಿದರೆ ಅಕ್ಕ ಪಕ್ಕ ಇರುವ ತೋಟದವರಿಗೆ ಅನುಕೂಲವಾಗಲಿದೆ. ಸಾಗಾಣಿಕಾ ವೆಚ್ಚ, ದುಬಾರಿ ದರ ತೆರುವುದು ತಪ್ಪಲಿದ್ದು, ಒಂದಿಷ್ಟು ಉಳಿತಾಯವೂ ಆಗಲಿದೆ.

ಕಳೆದ ಏಳು ವರ್ಷಗಳಿಂದ ಮಡಿಕೇರಿ ಜನತೆ ಕಸ ಸಮಸ್ಯೆ ವಿರುದ್ಧ ಹೋರಾಡುತ್ತಾ ಬರುತ್ತಿದ್ದು, ಇದೀಗ ಘನ ಉಚ್ಚ ನ್ಯಾಯಾಲಯವು ಪರಿಸರ ಮಾಲನ್ಯದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಒಂದು ಹಂತದ ಬೆಳವಣಿಗೆ ಕಂಡಿದೆ. ನ್ಯಾಯಾಲಯದ ಮೂಲಕವಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬಹುದೆಂಬ ಆಶಾಭಾವನೆಯಲ್ಲಿ ಮಡಿಕೇರಿ ಜನರಿದ್ದಾರೆ.