ವೀರಾಜಪೇಟೆ, ಮಾ. ೧೯: ಕೃಷಿ ಸಂಬAಧಿತ ಯೋಜನೆಗೆ ಅನುಮತಿಗಾಗಿ ನಿರಾಪೇಕ್ಷಣಾ ಪತ್ರ ಪಡೆಯಲು ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು ಕೂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಗ್ರಾಮ ಪಂಚಾಯಿತಿಯ ಪ್ರಥಮ ಸಭೆಯಲ್ಲಿ ವಿಷಯ ಚರ್ಚೆಗೆ ಗ್ರಾಸವಾಯಿತು.

ವೀರಾಜಪೇಟೆ ತಾಲೂಕಿನ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಪ್ರಥಮ ಗ್ರಾಮ ಸಭೆಯು ಕುತ್ತುನಾಡು ಸಹಕಾರ ಧವಸ ಭಂಡಾರ ಸಮೀಪದ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ನೇತ್ರಾವತಿ ಅಧ್ಯಕ್ಷತೆಯಲ್ಲಿ ನಡೆಯಿತು. ನೋಡೆÀಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆ ಸಹಾಯಕ ಅಧಿಕಾರಿ ದೀನಾ ಕುಶಾಲಪ್ಪ ಭಾಗವಹಿಸಿದ್ದರು.

ಕುಟ್ಟಂದಿ ಗ್ರಾಮಸ್ಥ ಕಾಳೆಯಂಗಡ ತರುಣ್ ತಿಮ್ಮಯ್ಯ ಮಾತನಾಡಿ, ಚೆಸ್ಕಾಂ ಇಲಾಖೆಗೆ ವಿದ್ಯುತ್ ಅಳವಡಿಕೆಗೆ ನಿರಾಪೇಕ್ಷಣಾ ಪತ್ರ ನೀಡಬೇಕಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇಲಾಖೆಯ ಅಧಿಕಾರಿ ವಿದ್ಯುತ್ ಸಂಪರ್ಕ ಮತ್ತು ಪಂಪ್‌ಸೆಟ್ ಅಳವಡಿಕೆ ಹಾಗೂ ಇತರ ವಿಷಯಗಳಿಗೆ ಇಲಾಖೆಗೆ ಮೂಲ ದಾಖಲಾತಿಗಳೊಂದಿಗೆ ಎನ್.ಓ.ಸಿ. ಪಡೆಯುವುದು ಮುಖ್ಯವಾಗಿದೆ ಎಂದರು.

ಸಾಲ ಮಾಡಿ ತೋಟಕ್ಕೆ ನೀರು ಹಾಯಿಸಲು ಕೆರೆ ನಿರ್ಮಾಣ ಮಾಡಲಾಗಿದ್ದು, ಕೆರೆಯಿಂದ ನೀರು ಸರಬರಾಜು ಮಾಡಲು ವಿದ್ಯುತ್ ಮೋಟರ್ ಅಳವಡಿಕೆಗಾಗಿ ದಾಖಲೆಗಳನ್ನು ಇಲಾಖೆಗೆ ನೀಡಿದ್ದೇನೆ. ಇಲಾಖೆಯು ಪಂಚಾಯಿತಿಯಿAದ ಎನ್.ಓ.ಸಿ ಪಡೆಯಬೇಕು ಎಂದಿದೆ. ಅದರೇ ಗ್ರಾಮ ಪಂಚಾಯಿತಿ ಎನ್.ಓ.ಸಿ ನೀಡಲು ಹಿಂದೇಟು ಹಾಕಿದೆ ಎಂದು ತರುಣ್ ಆರೋಪಿಸಿದರು.

ಪಿ.ಡಿ.ಓ ಪುಟ್ಟುರಾಜು ಪ್ರತಿಕ್ರಿಯಿಸಿ, ಇತರ ಇಲಾಖೆಗಳಿಗೆ ಪಂಚಾಯಿತಿಯಿAದ ಎನ್.ಓ.ಸಿ ನೀಡಲು ಸಾದ್ಯವಾಗುದಿಲ್ಲ. ನಿರಾಪೇಕ್ಷಣಾ ಪತ್ರ ನೀಡಲು ಸರ್ಕಾರದಿಂದ ಯಾವುದೇ ಸುತ್ತೋಲೆ ಇಲ್ಲ. ಅಲ್ಲದೆ ಪಂಚಾಯಿತಿಯಿAದ ನೀಡುವ ಪತ್ರದಲ್ಲಿ ಎಲ್ಲಾ ನಿಬಂಧನೆ ಒಳಗೊಂಡAತೆ ನಿಯಮ ಬದ್ದರಾಗಿ ಮೇಲಾಧಿ ಕಾರಿಗಳ ಆದೇಶದಂತೆ ಪತ್ರವನ್ನು ನೀಡುವು ದಾಗಿದೆ ಎಂದು ಸ್ಪಷ್ಟಪಡಿಸಿದರು.

ಪೌತಿ ಖಾತೆಯ ಬಗ್ಗೆ ಮಾಹಿತಿ ನೀಡಿದ ಇಲಾಖೆ ಸಿಬ್ಬಂದಿಗಳ ಮಾತಿಗೆ ಗ್ರಾಮಸ್ಥರು ಪರಿಪೂರ್ಣ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಇಲಾಖೆಯು ಈ ಹಿಂದೇ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆರು ತಿಂಗಳು ಕಳೆದರು ಒಂದು ಅರ್ಜಿಯು ಇತ್ಯರ್ಥಗೊಂಡಿಲ್ಲ ಎಂದು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷÀ ಉಮೇಶ್ ಕೇಚಮಯ್ಯ ಆರೋಪಿಸಿದರು.

ಗ್ರಾಮ ಪಂಚಾಯಿತಿ ಈ ಹಿಂದೆ ಕೋತ್ರಿಕಾಡ್ ಪೈಸಾರಿಯಲ್ಲಿ ಕಸ ವಿಲೇವಾರಿ ಮಾಡಲು ಸ್ಥಳ ನಿಗದಿ ಗೊಳಿಸಲಾಗಿತ್ತು. ವಾಸ ಮಾಡುವ ಗ್ರಾಮಸ್ಥರಿಂದ ವಿರೋಧ ಬಂದ ಹಿನ್ನೆಲೆ ನಿಗದಿಗೊಳಿಸಿದ ಸ್ಥಳವನ್ನು ಮರು ಪರಿಶೀಲನೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ಎ. ಭವ್ಯ ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಪಿ. ಗಿರೀಶ್ ಗಣಪತಿ ಮಾತನಾಡಿ, ಪೂರಕ ಬೆಂಬಲ ನೀಡುವಂತೆ ಮನವಿ ಮಾಡಿದರು. ನೋಡೆಲ್ ಅಧಿಕಾರಿ ದೀನಾ ಕುಶಾಲಪ್ಪ ಮಾತನಾಡಿ, ಸಭೆಯಲ್ಲಿ ಚರ್ಚೆಯಾದ ವಿಚಾರವನ್ನು ಸಂಬAಧಪಟ್ಟ ಅಧಿಕಾರಿಗೆ ಮುಟ್ಟಿಸಲಾಗುವುದು ಎಂದರು. ಜಿ.ಪಂ. ಸದಸ್ಯೆ ಅಪ್ಪಡೇರಂಡ ಭವ್ಯ ಮಾತನಾಡಿದರು.

ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು.

-ಕೆ.ಕೆ.ಎಸ್. ವೀರಾಜಪೇಟೆ