ಪಾಲಿಬೆಟ್ಟ, ಮಾ. ೧೯: ೨೦೨೧ನೇ ಸಾಲಿನ ತಿತಿಮತಿ ಗಿರಿಜನರ ಸಹಕಾರ ಸಂಘದ ಚುನಾವಣೆಯನ್ನು ನಿಯಮ ಉಲ್ಲಂಘಿಸಿ ನಡೆಸುತ್ತಿದ್ದು ಕೂಡಲೇ ಚುನಾವಣೆಯನ್ನು ಮುಂದೂಡದಿದ್ದಲ್ಲಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ ಹಾಗೂ ಸಂಘದ ಹಾಲಿ ಅಧ್ಯಕ್ಷ ಜೆ.ಕೆ. ರಾಮು ಎಚ್ಚರಿಸಿದ್ದಾರೆ.
ಜಿ.ಪಂ. ಸದಸ್ಯೆ ಪಂಕಜ ಮಾಧ್ಯಮಗಳೊಂದಿಗೆ ಮಾತನಾಡಿ, ವೀರಾಜಪೇಟೆ ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು ಬಹುತೇಕ ಸದಸ್ಯರು ಗ್ರಾಮೀಣ ಭಾಗದವರಾಗಿದ್ದಾರೆ.
ಚುನಾವಣೆ ನಡೆಸಬೇಕಾದರೆ ಆಡಳಿತ ಮಂಡಳಿ ತೀರ್ಮಾನಿಸಿ ನಿಗದಿತ ದಿನಾಂಕ ಸೂಚಿಸಿ ೫೦ ದಿನಗಳ ಮುಂಚೆಯೇ ಸದಸ್ಯರಿಗೆ ಮಾಹಿತಿ ನೀಡಬೇಕಾಗಿತ್ತು.
ಸಾಲಗಾರರು, ಸಾಲಗಾರರಲ್ಲದವರಿಗೆ ಸಹಕಾರ ಸಂಘದ ಮೂಲಕ ರಿಜಿಸ್ಟರ್ಡ್ ಪೋಸ್ಟ್ ಮಾಡಿ ಚುನಾವಣೆ ದಿನಾಂಕವನ್ನು ಗೊತ್ತು ಪಡಿಸುವ ಕೆಲಸ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳು ಎಲ್ಲವನ್ನೂ ಉಲ್ಲಂಘಿಸಿ ಏಕಾಏಕಿ ಆಡಳಿತಮಂಡಳಿಗೂ ಗೊತ್ತಿಲ್ಲದಂತೆ ಕೆಲವರಿಗೆ ಮಾಹಿತಿ ನೀಡಿ ಚುನಾವಣೆ ದಿನಾಂಕವನ್ನು ಪ್ರಕಟಿಸಿ ಈಗಾಗಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದ್ದಾರೆ. ೫ ಬಾರಿ ನಡೆಯುವ ಸಭೆಯಲ್ಲಿ ೩ ಬಾರಿ ಸಭೆಗೆ ಭಾಗವಹಿಸಿದವರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿದ್ದರೂ ನಿಯಮಗಳನ್ನು ಪಾಲಿಸದೆ ಚುನಾವಣೆ ಘೋಷಣೆ ಮಾಡಿರುವುದರ ವಿರುದ್ಧ ರಾಜಕೀಯ ಷÀಡ್ಯಂತ್ರ ನಡೆದಿದೆ.
ಕಾನೂನು ಉಲ್ಲಂಘಿಸಿ ನಡೆಸುವ ಚುನಾವಣೆಯನ್ನು ಮುಂದೂಡದಿದ್ದಲ್ಲಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಹಕಾರ ಸಂಘದ ಹಾಲಿ ಅಧ್ಯಕ್ಷ ಜೆ.ಕೆ. ರಾಮು ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ಉತ್ತಮ ವ್ಯವಹಾರದೊಂದಿಗೆ ಗಿರಿಜನರ ಅಭಿವೃದ್ಧಿಗಾಗಿ ನಡೆಯುತ್ತಿದ್ದ ಸಹಕಾರ ಸಂಘ ಇದೀಗ ನಿಯಮ ಉಲ್ಲಂಘಿಸುವ ಮೂಲಕ ಚುನಾವಣೆ ಘೋಷಣೆ ಮಾಡಿ ಮತದಾರರಿಗೆ ಮಾಹಿತಿ ನೀಡದೆ ಹುನ್ನಾರ ನಡೆಯುತ್ತಿದ್ದು ಕೂಡಲೇ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದ ಅವರು ರಾಜಕೀಯ ಷಡ್ಯಂತ್ರದಿAದ ಗಿರಿಜನ ಅಲ್ಲದವರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಹಿರಿಯ ನಿಬಂಧಕರಿಗೆ ದೂರು ನೀಡಲಾಗಿದ್ದು, ಚುನಾವಣೆ ಮುಂದೂಡದಿದ್ದಲ್ಲಿ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ಸಂದರ್ಭ ಸಹಕಾರ ಸಂಘದ ಕೆಲವು ಸದಸ್ಯರುಗಳು ಹಾಜರಿದ್ದರು.