ಮಡಿಕೇರಿ, ಮಾ. ೨೦: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮ) ಹಾಗೂ ನ್ಯಾಷನಲ್ ಇಂಟಿಗ್ರೇಟೆಡ್ ಫೋರಮ್ ಆಫ್ ಆರ್ಟಿಸ್ಟ್÷್ಸ ಮತ್ತು ಆ್ಯಕ್ಟಿವಿಸ್ಟ್ (ನೀಫಾ) ರೆಡ್‌ಕ್ರಾಸ್ ಸಂಸ್ಥೆ ಕೊಡಗು ಇವುಗಳ ಸಂಯುಕ್ತಾಶ್ರಯದಲ್ಲಿ ತಾ. ೨೩ ರಂದು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ‘ನೀಮ’ ಅಧ್ಯಕ್ಷ ಡಾ. ಎ.ಆರ್. ರಾಜಾರಾಮ್ ಅಖಿಲಾತಿ ಅವರು, ಸ್ವಾತಂತ್ರö್ಯ ಸಂಗ್ರಾಮದಲ್ಲಿ ದೇಶ ಪ್ರೇಮ ಮೆರೆದ ಭಗತ್ ಸಿಂಗ್, ರಾಜ್‌ಗುರು, ಸೂಖದೇವ್, ಅಶಫಾಕುಲ್ಲಾ ಖಾನ್ ಇವರುಗಳ ಬಲಿದಾನದ ನೆನಪಿನಲ್ಲಿ ತಾ. ೨೩ ರಂದು ನಗರದ ಬಾಲಭವನದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

ದೇಶದೆಲ್ಲೆಡೆ ಏಕಕಾಲದಲ್ಲಿ ೧೫೦೦ ಕೇಂದ್ರಗಳಲ್ಲಿ ಶಿಬಿರ ನಡೆಯಲಿದ್ದು, ದೇಶದ ಕೇಂದ್ರ ಸ್ಥಾನ ದೆಹಲಿಯಲ್ಲಿ ರಾಷ್ಟçಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಲಿದ್ದಾರೆ. ಮಡಿಕೇರಿಯಲ್ಲಿ ಶಿಬಿರ ತಾ. ೨೩ ರಂದು ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧ ಗಂಟೆವರೆಗೆ ನಡೆಯಲಿದೆ. ಈ ಶಿಬಿರಕ್ಕೆ ಮಡಿಕೇರಿ ನಗರ ಬಿಜೆಪಿ ಯುವ ಮೋರ್ಚಾ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಕೈಜೋಡಿಸುತ್ತಿವೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ರೆಡ್‌ಕ್ರಾಸ್ ಜಿಲ್ಲಾ ಸಭಾಪತಿ ರವೀಂದ್ರ ರೈ, ‘ನೀಮಾ’ ವಕ್ತಾರ ಡಾ. ಉದಯಶಂಕರ್, ಮಡಿಕೇರಿ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ ಉಪಸ್ಥಿತರಿದ್ದರು.