ಕುಶಾಲನಗರ, ಮಾ. ೨೦: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ,ತ್ಯಾಜ್ಯ ಎಸೆಯುವ ಜನರಿಗೆ ದಂಡ, ಅದರ ವೀಡಿಯೋ ಮಾಡಿ ಪಂಚಾಯಿತಿ ಕಚೇರಿಗೆ ಮಾಹಿತಿ ನೀಡುವ ವ್ಯಕ್ತಿಗೆ ಬಹುಮಾನ ನೀಡುವ ವಿಶೇಷ ಯೋಜನೆ ಜಾರಿಗೆ ಬಂದಿದೆ.
ತ್ಯಾಜ್ಯ ಮುಕ್ತ ಕುಶಾಲನಗರ ಮಾಡುವ ಸಂಕಲ್ಪ ಹೊಂದಿರುವ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಈ ವಿನೂತನ ರೀತಿಯ ಚಿಂತನೆಗೆ ಗುರುವಾರ ಚಾಲನೆ ದೊರೆತಿದೆ.
ಸ್ಥಳೀಯ ಲಾಡ್ಜ್ ಒಂದರ ತ್ಯಾಜ್ಯ ಸಾರ್ವಜನಿಕ ಜಾಗದಲ್ಲಿ ಸುರಿದ ವೀಡಿಯೋ ತುಣುಕುಗಳನ್ನು ನೀಡಿದ ವ್ಯಕ್ತಿಗೆ ಕಸ ಸುರಿದ ವ್ಯಕ್ತಿಯಿಂದ ವಸೂಲಿ ಮಾಡಿದ ಒಂದು ಸಾವಿರ ರೂಪಾಯಿಯನ್ನು ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ಸೇರಿದಂತೆ ಪಂಚಾಯಿತಿ ಸದಸ್ಯರು ವಿತರಿಸಿದರು.