ಜೋಷಿ ಆಶಯ
ಮಡಿಕೇರಿ, ಮಾ. ೧೯: ಕನ್ನಡ ಸಾಹಿತ್ಯ ಪರಿಷತ್ ಅನ್ನು, ಜನಸಾಮಾನ್ಯರ ಪರಿಷತ್ ಮಾಡಲು ಪರಿಷತ್ ಸೇವಾಕಾಂಕ್ಷಿ ಆಗಿದ್ದೇನೆ ಎಂದು ನಾಡೋಜ ಮಹೇಶ್ ಜೋಷಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ ತಿಂಗಳಿನಲ್ಲಿ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯು ತ್ತಿದೆ. ದೂರ ದರ್ಶನ ವಾಹಿನಿ ಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದು, ಪುನರ್ವಸತಿ ಅಥವಾ ಅಧಿಕಾರದ ಆಸೆಯಿಂದ ಬರುತ್ತಿಲ್ಲ. ಪರಿಷತ್‌ನಲ್ಲಿ ಬದಲಾವಣೆ ಮಾಡಬೇಕೆಂಬ ಹಂಬಲವಿದೆ ಎಂದು ಜೋಷಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅನ್ನು ಜನಸಾಮಾನ್ಯರ ಪರಿಷತ್ ಆಗಿ ಮಾಡುತ್ತೇನೆ. ಆಜೀವ ಸದಸ್ಯರ ಶುಲ್ಕವನ್ನು ಕಡಿಮೆ ಮಾಡುತ್ತೇನೆ. ಪರಿಷತ್ ಸದಸ್ಯತ್ವ ಪಡೆಯುವ ವಿಧಾನವನ್ನು ಸರಳೀಕರಣ ಮಾಡುತ್ತೇನೆ. ಪರಿಷತ್ ಚುನಾವಣೆ ಇನ್ನು ಮುಂದೆ ಪಾರದರ್ಶಕವಾಗಿ ಕೆಲಸ ಮಾಡುವಂತೆ ಮಾಡುತ್ತೇನೆ. ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಪರಿಷತ್ ವ್ಯಾಪ್ತಿಯನ್ನು ವಿಸ್ತರಿಸುತ್ತೇನೆ. ಮಾತೃಭಾಷೆಯಲ್ಲಿಯೇ ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು.
ಕನ್ನಡ ಶಾಲೆಗಳು ಮುಚ್ಚದಂತೆ ಹಾಗೆ ಜಾಗೃತಿ ವಹಿಸುತ್ತೇನೆ ಎಂದು ಹೇಳಿದರು. ಗೋಷ್ಠಿಯಲ್ಲಿ ಸುನಿಲ್, ಧರ್ಮಪಾಲ್ ಇದ್ದರು.