ಸಿದ್ದಾಪುರ, ಮಾ ೨೦: ಕರಡಿಗೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕುಡಿಯುವ ನೀರಿನ ಶೇಖರಣೆಯ ಟ್ಯಾಂಕನ್ನು ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಿದರು.

ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು ಗ್ರಾಮದ ಕುಕ್ಕುನೂರು ನಾಣಯ್ಯ ಸಹೋದರರು ನೀಡಿರುವ ಜಾಗದಲ್ಲಿ ರೂ. ೩೨ ಲಕ್ಷ ವೆಚ್ಚದ ೫೦ ಸಾವಿರ ಲೀಟರ್‌ನ ಬೃಹತ್ ಟ್ಯಾಂಕನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಕರಡಿಗೋಡು ಗ್ರಾಮದ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರೂ. ೩೨ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಟ್ಯಾಂಕ್ ಹಾಗೂ ಪೈಪ್‌ಲೈನ್ ಕಾಮಗಾರಿಯಿಂದಾಗಿ ನೀರಿನ ಸಮಸ್ಯೆ ಬಗೆಹರಿದಿದೆ ಎಂದರು. ವೀರಾಜಪೇಟೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರೂ. ೩೦ ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ತೀತಮಾಡ ರೀನಾ ತುಳಸಿ, ಉಪಾಧ್ಯಕ್ಷ ಮಹೇಶ್ ಕುಮಾರ್, ಗ್ರಾ.ಪಂ ಸದಸ್ಯರುಗಳಾದ ಸುಳ್ಳೆಕೋಡಿ ಜಯಂತ್, ರೇಖಾ ರೈ, ಅನಿಲ್, ಉಷಾ, ಧನಲಕ್ಷಿö್ಮ, ಪೂರ್ಣಿಮಾ, ಎಂ.ಎ ಆನಂದ, ಸ್ಥಳ ದಾನಿ ಕುಕ್ಕುನೂರು ನಾಣಯ್ಯ, ಬಿಜೆಪಿ ಪಕ್ಷದ ಪ್ರಮುಖರಾದ ಬಿ.ಕೆ ಅನಿಲ್ ಶೆಟ್ಟಿ, ಪ್ರವೀಣ್, ಶಾಜಿ, ರೂಪೇಶ್ ಗ್ರಾ.ಪಂ. ಸದಸ್ಯ ಲೋಕೇಶ್ ಇನ್ನಿತರರು ಹಾಜರಿದ್ದರು.