ಮಡಿಕೇರಿ, ಮಾ. ೧೯: ಕೊಡಗು ಜಿಲ್ಲಾ ತಮಿಳು ಯೂತ್ ಫೆಡರೇಷನ್ ವತಿಯಿಂದ ತಾ. ೨೦ರಂದು (ಇಂದು) ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೧೦ ಗಂಟೆಗೆ ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಪರಿಸರ ಪ್ರಿಯರಾದ ಮುರುಳೀಧರ ಅವರು ಭಾಗವಹಿಸಲಿದ್ದಾರೆ. ಗುಬ್ಬಚ್ಚಿ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ, ಚಿತ್ರಕಲೆ ಹಾಗೂ ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ. ಈ ಸಂದರ್ಭ ವೆಸ್ಟರ್ನ್ ಘಾಟ್ ನೇಚರ್ ಫೌಂಡೇಶನ್ ವತಿಯಿಂದ ಶಾಲೆಯ ಆವರಣದಲ್ಲಿ ಎರಡು ಗುಬ್ಬಚ್ಚಿ ಗೂಡನ್ನು ಅಳವಡಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಕೊಡಗು ತಮಿಳು ಯೂತ್ ಫೆಡರೇಷನ್ ಅಧ್ಯಕ್ಷ ರವಿ, ವೆಸ್ಟರ್ನ್ ಘಾಟ್ ನೇಚರ್ ಫೌಂಡೇಶನ್ ನ ಸಜನ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ವಿಜೇತರ ವಿವರ
ಗುಬ್ಬಚ್ಚಿ ಚಿತ್ರ ರಚನೆ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಲಯನ್ಸ್ ನರ್ಸರಿ ಹಾಗೂ ಪ್ರಾಥಮಿಕ ಶಾಲೆಯ ಡೆರಿನ್ ಬ್ರೋನ್ ಸೈಮನ್ (ಪ್ರಥಮ), ಪಿ.ಎಸ್. ಶಶ್ವತ್ಥ್ (ದ್ವಿತೀಯ) ಹಾಗೂ ದಿಶಾ ಚೆಂಗಪ್ಪ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ಕವನ ಸ್ಪರ್ಧೆಯಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿಘ್ನೇಶ್ (ಪ್ರಥಮ), ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾವತಿ (ದ್ವಿತೀಯ) ಸ್ಥಾನ ಪಡೆದಿದ್ದಾರೆ.