ಭಾಗಮಂಡಲ, ಮಾ. ೧೮: ಭಾಗಮಂಡಲ ವ್ಯಾಪ್ತಿಯ ಪ್ರಮುಖ ರಾಜಕಾರಣಿ ಹೊಸೂರು ಸತೀಶ್‌ಜೋಯಪ್ಪ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ. ಏಪ್ರಿಲ್ ೫ ರಂದು ಭಾಗಮಂಡಲದಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಭಾಗಮಂಡಲ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಬೆಂಬಲಿಗರೊAದಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ಹೊಸೂರು ಸತೀಶ್‌ಕುಮಾರ್ ‘ಶಕ್ತಿ’ಗೆ ತಿಳಿಸಿದರು.
ಭಾಗಮಂಡಲ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷವನ್ನು ಮುನ್ನಲೆಗೆ ತಂದ ಹಾಗೂ ಹಲವಾರು ವರ್ಷಗಳಿಂದ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಹೊಸೂರು ಸತೀಶ್‌ಕುಮಾರ್ ತಮಗೆ ಪಕ್ಷದಲ್ಲಿ ಸೂಕ್ತ ಮನ್ನಣೆ ದೊರಕದಿರುವ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದರು. ೧೯೯೬-೯೭ರಿಂದ ಈ ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರಾಗಿ ವಿವಿಧ ಸವಾಲುಗಳನ್ನು ಸ್ವೀಕರಿಸಿ ತಳಮಟ್ಟದಲ್ಲಿ ದುಡಿದು ಜೆಡಿಎಸ್ ಪಕ್ಷವನ್ನು ಸಂಘಟಿಸಿದ್ದೇನೆ. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಜಿಲ್ಲಾಪಂಚಾಯಿತಿಯ ಏಕೈಕ ಸದಸ್ಯನಾಗಿ ದುಡಿದಿದ್ದೇನೆ. ಭಾಗಮಂಡಲದಲ್ಲಿ ಎರಡು ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ನಡೆಸಿದಾಗ ಹಿರಿಯ ನಾಯಕರಿಂದ ಸ್ಪಂದನ ದೊರೆತಿಲ್ಲ. ೨೫ ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದು ಜನಮನ್ನಣೆ ಗಳಿಸಿರುವ ತನಗೆ ನೈತಿಕ ಸ್ಥೆöÊರ್ಯವನ್ನು ತುಂಬುವ ಕೆಲಸ ಮಾಡಿಲ್ಲ ಎಂದಿರುವ ಅವರು ಪ್ರಸಕ್ತ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷನಾಗಿ ಭಾಗಮಂಡಲ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯಲು ಜಿಲ್ಲೆಯ ಬಿಜೆಪಿ ನಾಯಕರ ಸಂಪೂರ್ಣ ಬೆಂಬಲ ದೊರಕಿರುವುದರಿಂದ ಆಡಳಿತ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಬಯಸಿರುವುದಾಗಿ ತಿಳಿಸಿದರು.
ಕೊಡಗು ಪ್ರಗತಿಪರ ಜೇನು ಕೃಷಿಕರ ಸಂಘದ ಅಧ್ಯಕ್ಷರಾಗಿ, ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಭಗಂಡೇಶ್ವರ ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸತೀಶ್‌ಕುಮಾರ್ ಇನ್ನೂ ಹಲವಾರು ಸಂಘಸAಸ್ಥೆಗಳಲ್ಲಿ ದುಡಿದಿದ್ದು ಜಿಲ್ಲೆಯ ಜನರ ವಿಶ್ವಾಸವನ್ನು ಗಳಿಸಿದ್ದಾರೆ. -ಸುನಿಲ್