ಸೋಮವಾರಪೇಟೆ, ಮಾ. ೧೮: ಅಂರ‍್ರಾಷ್ಟಿçÃಯ ಸೇವಾ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಪರಿಸರ ಹಾಗೂ ಜಲ ಸಂರಕ್ಷಣೆಯತ್ತ ಚಿತ್ತ ಹರಿಸಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಎಂ. ರಂಗನಾಥ ಭಟ್ ಅಭಿಪ್ರಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರೋಟರಿ ಸಂಸ್ಥೆಯಿAದ ಪ್ರಸಕ್ತ ವರ್ಷ ೧ ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದ್ದು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ೨ಲಕ್ಷಕ್ಕೂ ಅಧಿಕ ಗಿಡಗಳನ್ನು ವಿತರಿಸಲಾಗಿದೆ ಎಂದರು.

ರೋಟರಿ ಜಿಲ್ಲೆಗೆ ಒಳಪಡುವ ದಕ್ಷಿಣಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ರೋಟರಿ ಸಂಸ್ಥೆಯ ಮೂಲಕ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈಗಾಗಲೇ ಚೆಕ್‌ಡ್ಯಾಂ ನಿರ್ಮಾಣ, ನಿರ್ವಹಣೆ, ಕೆರೆ ಪುನರುಜ್ಜೀವನಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿಯಿತ್ತರು.

ಮುಂದಿನ ದಿನಗಳಲ್ಲಿ ಕೊಡಗಿನಲ್ಲೂ ಸಮುದಾಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು. ಪೋಲಿಯೋ ಮುಕ್ತ ಹೋರಾಟದಲ್ಲಿ ರೋಟರಿ ಯಶ ಸಾಧಿಸಿದೆ. ದೇಶದಲ್ಲಿ ೨೦೧೧ರಲ್ಲಿ ಕೊನೆಯ ಪ್ರಕರಣ ಕಂಡುಬAದಿದ್ದು, ನಂತರ ದೇಶ ಪೋಲಿಯೋ ಮುಕ್ತವಾಗಿದೆ. ದೇಶದಲ್ಲಿ ೪೫೦೦ಕ್ಕೂ ಅಧಿಕ ಕ್ಲಬ್‌ಗಳಿದ್ದು, ೧.೫೩ ಲಕ್ಷ ರೊಟೇರಿಯನ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿದ್ದ ರೋಟರಿ ಅಧ್ಯಕ್ಷ ಎಂ.ಡಿ. ಲಿಖಿತ್ ಮಾತನಾಡಿ ರೋಟರಿ ಸಂಸ್ಥೆಯಿAದ ಈಗಾಗಲೇ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಲವಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಕ್ಕೆಹೊಳೆ ಜಂಕ್ಷನ್ ಬಳಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಕೋವರ್‌ಕೊಲ್ಲಿ ಜಂಕ್ಷನ್ ಬಳಿಯಲ್ಲಿ ಸಂಚಾರ ಗಮನಿಸಲು ಮಿರರ್ ಅಳವಡಿಸಲಾಗುವುದು. ಸುಂಟಿಕೊಪ್ಪ, ಕೂಡಿಗೆಯಲ್ಲಿ ನೂತನವಾಗಿ ಕ್ಲಬ್ ಸ್ಥಾಪಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ರೋಟರಿ ಸಹಾಯಕ ರಾಜ್ಯಪಾಲ ಪಿ.ಕೆ. ರವಿ, ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು.

ಹೈಮಾಸ್ಟ್ ದೀಪ ಉದ್ಘಾಟನೆ: ರೋಟರಿ ಕ್ಲಬ್ ವತಿಯಿಂದ ಇಲ್ಲಿನ ವಿವೇಕಾನಂದ ವೃತ್ತದ ಬಳಿಯಲ್ಲಿ ರೂ. ೧.೭೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಮಾಸ್ಟ್ ದೀಪ ಹಾಗೂ ರೂ. ೨೫ ಸಾವಿರ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಆಸ್ಪತ್ರೆಯ ಪ್ರವೇಶ ದ್ವಾರವನ್ನು ಜಿಲ್ಲಾ ರಾಜ್ಯಪಾಲ ರಂಗನಾಥ್ ಭಟ್ ಉದ್ಘಾಟಿಸಿದರು. ಇದರೊಂದಿಗೆ ಕ್ಲಬ್ ವತಿಯಿಂದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಗೆ ರೂ. ೨೦ ಸಾವಿರ ವೆಚ್ಚದಲ್ಲಿ ಮಾನಿಟರ್ ವಿತರಿಸಲಾಯಿತು.

ರೋಟರಿ ಸದಸ್ಯರು ಹಾಗೂ ದಾನಿಗಳಾದ ಬಿ.ಎಸ್. ಸುಂದರ್, ಬಿ.ಎಂ. ದಿನೇಶ್, ಹರಪಳ್ಳಿ ರವೀಂದ್ರ, ಡಿ.ಕೆ. ಅರುಣ್‌ಕುಮಾರ್, ಗಿರೀಶ್ ಮಲ್ಲಪ್ಪ ಅವರ ಸಹಕಾರದಿಂದ ಹೈಮಾಸ್ಟ್ ಬೀದಿದೀಪ ಅಳವಡಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಎಂ.ಡಿ. ಲಿಖಿತ್ ಹೇಳಿದರು. ಮುಂದಿನ ದಿನಗಳಲ್ಲಿ ದೀಪದ ನಿರ್ವಹಣೆಯನ್ನು ಪಂಚಾಯಿತಿ ನಿರ್ವಹಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್, ವಲಯ ೬ರ ಸಹಾಯಕ ರಾಜ್ಯಪಾಲ ಪಿ.ಕೆ. ರವಿ, ರೋಟರಿ ಪ್ರಥಮ ಮಹಿಳೆ ರಜಿನಿ, ರೋಟರಿ ಸ್ಥಾಪಕ ಅಧ್ಯಕ್ಷ ಎಚ್.ಸಿ. ನಾಗೇಶ್, ರೋಟರಿ ಕಾರ್ಯದರ್ಶಿ ಕೆ.ಡಿ. ಜೀವನ್ ಕುಮಾರ್, ಮಾಜಿ ಸಹಾಯಕ ರಾಜ್ಯಪಾಲ ಪಿ. ನಾಗೇಶ್, ಎ.ಡಿ. ಶುಭಕರ್, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ರೋಟರಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.