ಭಾಗಮಂಡಲ, ಮಾ. ೧೮: ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದ ಕಲ್ಲುತಿರಿಕೆ ಸದಾಶಿವ ಉತ್ಸವವು ವಿಜೃಂಭಣೆಯಿAದ ನೆರವೇರಿತು. ಉತ್ಸವದ ಅಂಗವಾಗಿ ಬೇಡುಪಟ್ಟಣಿ, ಎತ್ತುಪೋರಾಟ, ದೇವರಬಲಿ, ಮತ್ತಿತರ ಕಾರ್ಯಕ್ರಮಗಳು ಜರುಗಿದವು. ಉತ್ಸವದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ದೇವರ ಅವಭೃತ ಸ್ನಾನ ಹಾಗೂ ಕಳಶಪೂಜೆಯೊಂದಿಗೆ ಉತ್ಸವ ಸಂಪನ್ನಗೊAಡಿತು.