ಸೋಮವಾರಪೇಟೆ, ಮಾ. ೧೮: ಇಲ್ಲಿನ ಲಯನ್ಸ್ ಸಂಸ್ಥೆಯ ಆಶ್ರಯದಲ್ಲಿ ತಾ. ೨೦ ರಂದು ಸಂಜೆ ೪ ಗಂಟೆಗೆ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಲಯನ್ಸ್ನ ಪ್ರಾಂತೀಯ ಸಮ್ಮೇಳನ-ಬಾಂಧವ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂ.ಎ. ಹರೀಶ್ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂತೀಯ ಅಧ್ಯಕ್ಷ ಕೆ.ಎಂ. ಜಗದೀಶ್ ವಹಿಸಲಿದ್ದಾರೆ. ಪ್ರಾಂತೀಯ ಪ್ರಥಮ ಮಹಿಳೆ ಶಿವಾನಿ ಜಗದೀಶ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೌನ್ಸಿಲ್ ಚೇರ್‌ಮೆನ್ ಡಾ. ನಾಗರಾಜ್ ವಿ. ಬೈರಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಲಹೆ ಗಾರರಾದ ಸಿ.ಎ. ಮುತ್ತಣ್ಣ, ಎ.ಆರ್. ಮುತ್ತಣ್ಣ, ಜೆ.ಸಿ. ಶೇಖರ್, ಎಸ್.ಬಿ. ಲೀಲಾರಾಂ, ಕಾರ್ಯಕಾರಿ ಸಮಿತಿಯ ಎ.ಎಸ್. ಮಲ್ಲೇಶ್, ರಾಜಾರಾಂ, ಪವನ್ ಮುತ್ತಪ್ಪ, ಎನ್.ಬಿ. ರಾಮಚಂದ್ರ ಭಾಗವಹಿಸಲಿ ದ್ದಾರೆ ಎಂದು ಹರೀಶ್ ಮಾಹಿತಿ ನೀಡಿದ್ದಾರೆ.