ಮಡಿಕೇರಿ, ಮಾ. ೧೮: ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆಗೆ ಕಾರ್ಯಕ್ರಮದಂತೆ ತಹಶೀಲ್ದಾರರು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ, ವಾಸ್ತವ್ಯ ಮಾಡಿ ರೈತರ ದಾಖಲೆಗಳು ಹಾಗೂ ಸೇವೆಯನ್ನು ಪರಿಶೀಲಿಸಿ/ ಪರಿಹಾರಗಳಿಗೆ ಕ್ರಮಕೈಗೊಳ್ಳಲಿದ್ದಾರೆ.
ಆ ದಿಸೆಯಲ್ಲಿ ಸಂಪಾಜೆ ಹೋಬಳಿಯ ಚೆಂಬು ಗ್ರಾಮ ಪಂಚಾಯಿತಿಗೆ ತಾ. ೨೦ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ಅವರು ಗ್ರಾಮ ವಾಸ್ತöವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪಹಣಿ ದಾಖಲೆಗಳ ತಿದ್ದುಪಡಿ, ಗ್ರಾಮದ ಪೌತಿ ಖಾತೆಗಳ ಕ್ರಮಗೊಳಿಸುವ ವಿಷಯಗಳು, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ವಿಷಯಗಳು, ಆಹಾರ ಪಡಿತರ ಚೀಟಿಗೆ ಸಂಬAಧಿಸಿದ ವಿಷಯಗಳು, ಪೋಡಿ/ ಅಳತೆ ವಿಚಾರಕ್ಕೆ ಸಂಬAಧಿಸಿದ ವಿಷಯಗಳು, ಸ್ಮಶಾನ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಜಮೀನು ಕಾಯ್ದಿರಿಸುವಿಕೆ ವಿಷಯಗಳು, ಸರ್ಕಾರಿ ಜಮೀನಿನ ಒತ್ತುವರಿ ವಿಚಾರಗಳು, ಆಧಾರ್ ಕಾರ್ಡಿಗೆ ಸಂಬAಧಿಸಿದ ವಿಷಯಗಳು, ನಾಡ ಕಚೇರಿ/ಎ.ಜೆ.ಎಸ್.ಕೆ. ಕೇಂದ್ರಗಳಲ್ಲಿ ನೀಡುವ ಸೇವೆಗಳ ಕುರಿತು, ಅತಿವೃಷ್ಟಿ ಪರಿಹಾರ ವಿಚಾರಗಳು, ಗ್ರಾಮದ ಸಮಸ್ಯೆಗಳ ಇತರ ವಿಷಯಗಳ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಸ್ಥಳದಲ್ಲೇ ಅಂತಿಮ ವಿಲೇವಾರಿ/ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಕ್ರಮವಹಿಸಲಿದ್ದಾರೆ ಎಂದು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.