ಸೋಮವಾರಪೇಟೆ, ಮಾ. ೧೮: ತಾಲೂಕು ಪಂಚಾಯಿತಿಯ ೧.೫೦ಲಕ್ಷ ರೂ.ಗಳ ಅನುದಾನದಲ್ಲಿ ಚನ್ನಾಪುರ ಗ್ರಾಮದ ಗ್ರಾಮದೇವತೆ ಬನದ ಮುಂಭಾಗದ ರಸ್ತೆ ಚರಂಡಿ ಕಾಮಗಾರಿಗೆ ತಾಪಂ ಸದಸ್ಯೆ ಕುಸುಮಾ ಅಶ್ವಥ್ ಚಾಲನೆ ನೀಡಿದರು.
ಈ ಸಂದರ್ಭ ಗೌಡಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಗ್ರಾಮದ ಪ್ರಮುಖರಾದ ಸಿ.ಎನ್. ಅಶ್ವಥ್, ಪಿ.ಆರ್. ರಾಮಚಂದ್ರ, ಜಿ.ಕೆ. ಸುರೇಶ್, ಡಿ.ಎಸ್. ಸುಬ್ರಮಣಿ, ಗಂಗಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.