ಮಡಿಕೇರಿ, ಮಾ. ೧೮: ಅನಾಥ ಮಹಿಳೆಯ ಅಂತ್ಯಸAಸ್ಕಾರ ನೆರವೇರಿಸುವ ಮೂಲಕ ಕೊಡಗು ಯೂತ್ ಕಮಿಟಿಯ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.

ಮಡಿಕೇರಿಯ ಶಕ್ತಿ ವೃದ್ಧಾಶ್ರಮದಲ್ಲಿ ಮಂಗಳವಾರ ಸಂಜೆ ಮೃತಪಟ್ಟ ಅನಾಥ ಮಹಿಳೆಯ ಅಂತ್ಯಸAಸ್ಕಾರ ನೆರವೇರಿಸಲು ಯಾರೂ ಇಲ್ಲದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮೈಕಲ್ ವೇಗಸ್ ಅವರ ಕರೆಯ ಮೇರೆಗೆ ಕೊಡಗು ಯೂತ್ ಕಮಿಟಿಯ ಅಧ್ಯಕ್ಷ ಜೈನುಲ್ ಆಬಿದ್ ಹಾಗೂ ತಂಡ ಅನಾಥ ಶವದ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕೊಡಗು ಯೂತ್ ಕಮಿಟಿಯ ಮೈಸಿ ಕತ್ತಣ್ಣಿರ, ನಿಹಾಲ್, ಫೌಜಾನ್, ನದೀರ್, ಲುಕ್ಮಾನ್, ಶಿಫಾ ಆ್ಯಂಬ್ಯುಲೆನ್ಸ್ ಶುಕೂರ್ ಇದ್ದರು.