ಮಡಿಕೇರಿ, ಮಾ. ೧೮: ಸಾಂಬಾರ ಪದಾರ್ಥಗಳಾದ ಏಲಕ್ಕಿ, ಕರಿಮೆಣಸು ಹಾಗೂ ಶುಂಠಿ ಬೆಳೆಗಳ ಉತ್ಪಾದನೆಗೆ ಆಧುನಿಕ ತಂತ್ರಜ್ಞಾನದ ಬಳಕೆಯ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಅಪ್ಪಂಗಳದ ಭಾರತೀಯ ಸಾಂಬಾರ ಪದಾರ್ಥಗಳ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕೇರಳದ ಕೊಜಿಕೋಡಿನ ಡಿ.ಎ.ಎಸ್.ಡಿ ಪ್ರಾಯೋಜಕತ್ವದಲ್ಲಿ ತಾ. ೨೪ ರಂದು ತರಬೇತಿ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ ೯.೩೦ಕ್ಕೆ ತರಬೇತಿ ಪಡೆಯುವವರು ನೋಂದಣಿ ಮಾಡಬೇಕಿದೆ. ೧೦ ಗಂಟೆಗೆ ಕಾರ್ಯಕ್ರಮವನ್ನು ಡಿ.ಎ.ಎಸ್.ಡಿ ಯ ನಿರ್ದೇಶಕ ಡಾ.ಹೋಮಿ ಚೆರಿಯನ್ ನೆರವೇರಿಸಲಿದ್ದಾರೆ. ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಸ್.ಜೆ ಅಂಕೇಗೌಡ, ಕೊಜಿಕೋಡು ಐ.ಸಿ.ಎ.ಆರ್‌ನ ನಿದೇರ್ಶಕಿ ಡಾ. ಜೆ. ರಮಾ ಅವರು ಭಾಗವಹಿಸಲಿದ್ದಾರೆ. ವಿಜ್ಞಾನಿಗಳಾದ ಡಾ. ಎಂ.ಎಸ್. ಶಿವಕುಮಾರ್, ಡಾ. ಎಸ್.ಜೆ. ಅಂಕೇಗೌಡ, ಡಾ. ಹೊನ್ನಪ್ಪ ಅಸಂಗಿ, ಡಾ. ಬಾಲಾಜಿ ರಾಜಕುಮಾರ್, ಡಾ.ಮಹಮ್ಮದ್ ಫೌಸಲ್.ಪಿ ಅವರುಗಳು ವಿವಿಧ ವಿಷಯಗಳ ಕುರಿತು ತಾಂತ್ರಿಕ ಮಾಹಿತಿ ನೀಡಲಿದ್ದಾರೆ.