ನಾಪೋಕ್ಲು, ಮಾ. ೧೭: ಕೆಂಬಟ್ಟಿ ಜನಾಂಗದ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವ ಉದ್ದೇಶದಿಂದ ಮೇ ತಿಂಗಳಲ್ಲಿ ಕೊಡಗು ಜಿಲ್ಲೆಯ ಕೆಂಬಟ್ಟಿ ಜನಾಂಗದ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಕೊಡಗು ಜಿಲ್ಲಾ ಕೆಂಬಟ್ಟಿ ಜನಾಂಗದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೊಡ್ಡ ಕುಟ್ಟಡ ರಾಮು ಅಯ್ಯಪ್ಪ ಹೇಳಿದರು.
ಅವರು ನಾಪೋಕ್ಲು ಬಳಿಯ ಚೆರಿಯ ಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೇತು ಕ್ರಿಕೆಟ್ ರಾರ‍್ಸ್ ಸಮಿತಿಯಿಂದ ಕೆಂಬಟ್ಟಿ ಜನಾಂಗಕ್ಕೆ ಆಯೋಜಿಸಲಾದ ಕ್ರಿಕೆಟ್, ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೆಂಬಟ್ಟಿ ಜನಾಂಗದವರು ೧೦ ರಿಂದ ೧೫ ಸಾವಿರದಷ್ಟಿದ್ದು, ಇವರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಇವರನ್ನು ಆರ್ಥಿಕವಾಗಿ ಸಬಲಗೊಳಿಸಲು ಸಮಗ್ರ ವರದಿಯನ್ನು ತಯಾರಿಸಲು ಚಿಂತನೆಯನ್ನು ನಡೆಸಲಾಗಿದೆ ಎಂದರು. ಜನಾಂಗದ ಬೇಡಿಕೆಯನ್ನು ಈಡೇರಿಸಲು ಮುಂದಿನ ಮೇ ತಿಂಗಳಲ್ಲಿ ಸಮಾವೇಶವನ್ನು ನಡೆಸಲು ತೀರ್ಮಾನವನ್ನು ಕೈಗೊಂಡಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ, ಸಾವಿರದಷ್ಟಿದ್ದು, ಇವರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಇವರನ್ನು ಆರ್ಥಿಕವಾಗಿ ಸಬಲಗೊಳಿಸಲು ಸಮಗ್ರ ವರದಿಯನ್ನು ತಯಾರಿಸಲು ಚಿಂತನೆಯನ್ನು ನಡೆಸಲಾಗಿದೆ ಎಂದರು. ಜನಾಂಗದ ಬೇಡಿಕೆಯನ್ನು ಈಡೇರಿಸಲು ಮುಂದಿನ ಮೇ ತಿಂಗಳಲ್ಲಿ ಸಮಾವೇಶವನ್ನು ನಡೆಸಲು ತೀರ್ಮಾನವನ್ನು ಕೈಗೊಂಡಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ, ಪಂಚಾಯತ್ ಸದಸ್ಯ ಕಾಳೆಯಂಡ ಸಾಬ ತಿಮ್ಮಯ್ಯ, ಬೊಳ್ಳೆಪಂಡ ಹರೀಶ್, ಗಣಪ, ಸೋಮಣ್ಣ, ಕ್ಲಬ್ ಅಧ್ಯಕ್ಷ ಚೇತನ್ ಸುಬ್ಬಯ್ಯ, ಕಾರ್ಯದರ್ಶಿ ರತನ್, ಮತ್ತಿತರರು ಇದ್ದರು.
ಕೆಂಬಟ್ಟಿ ಜನಾಂಗ ಬಾಂಧವರ ವಿವಿಧ ಕ್ರೀಡಾಕೂಟಗಳಿಗೆ ಚಾಲನೆ ನೀಡಲಾಯಿತು. ಕ್ರೀಡಾಕೂಟವು ತಾ. ೨೧ರ ವರೆಗೆ ನಡೆಯಲಿದೆ. -ದುಗ್ಗಳ