ಮಡಿಕೇರಿ, ಮಾ. ೧೭: ವಿಶ್ವಸಂಸ್ಥೆಯ ಅಂರ‍್ರಾಷ್ಟಿçÃಯ ಜನಾಂಗೀಯ ತಾರತಮ್ಯ ನಿವಾರಣಾ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಾ. ೨೧ ರಂದು ಕ್ಯಾಪಿಟಲ್ ವಿಲೇಜ್‌ನಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ವಿಚಾರಗೋಷ್ಠಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಬುಡಕಟ್ಟು ಕುಲವನ್ನು ಕೊಡಗಿನ ಆದಿಮ ಸಂಜಾತ ಪ್ರಾಚೀನ ಬುಡಕಟ್ಟು ಕುಲವೆಂದು ಪರಿಗಣಿಸಬೇಕು. ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ೩೪೦ ಮತ್ತು ೩೪೨ನೇ ವಿಧಿಯಂತೆ ಎಸ್‌ಟಿಗೆ ಸೇರಿಸಿ ರಾಜ್ಯಾಂಗ ಖಾತ್ರಿ ನೀಡಬೇಕು. ಕೊಡವ ಲ್ಯಾಂಡ್ ಜಿಯೋ ಪೊಲಿಟಿಕಲ್ ಆಟೋನಮಿ ರಚಿಸಬೇಕು ಎಂಬಿತ್ಯಾದಿ ಬೇಡಿಕೆ ಗಳನ್ನು ಮುಂದಿಟ್ಟುಕೊAಡು ಸಿಎನ್‌ಸಿ ಹೋರಾಟ ಮಾಡುತ್ತಾ ಬಂದಿದ್ದು, ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ತಾ. ೨೧ ರಂದು ನಡೆಯುವ ವಿಚಾರಗೋಷ್ಠಿಯಲ್ಲಿ ಅತಿಥಿಗಳಾಗಿ ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್, ಬುಡಕಟ್ಟು ಕುರುಬ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಕವಳ್ಳಿ ಮಂಜುನಾಥ್, ಮುಂಬೈನ ವಿರಾಟ್ ಹಿಂದೂಸ್ಥಾನ್ ಸಂಗಮ್ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಸಿಎನ್‌ಸಿಯ ಹಕ್ಕೊತ್ತಾಯಗಳ ಕುರಿತು ಮಾತನಾಡಲಿದ್ದಾರೆ ಎಂದು ನಾಚಪ್ಪ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಸಿಎನ್‌ಸಿಯ ಚಂಬಾAಡ ಜನತ್, ಪುಲ್ಲೇಳ ಕಾಳಪ್ಪ, ಪುದಿಯೊಕ್ಕಡ ಕಾಶಿ, ಪೊರಿಮಂಡ ದಿನಮಣಿ, ಚೋಳಪ್ಪಂಡ ನಾಣಯ್ಯ ಉಪಸ್ಥಿತರಿದ್ದರು.