ಕೂಡಿಗೆ, ಮಾ. ೧೭: ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಸಮೀಪದಲ್ಲಿ ಕಂದಾಯ ಇಲಾಖೆ ವತಿಯಿಂದ ಕಸ ವಿಲೇವಾರಿ ಘಟಕವನ್ನು ಅರಂಭಿಸಲು ಕಾದಿರಿಸಿರುವ ಜಾಗಕ್ಕೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಮತ್ತು ಜನಪ್ರತಿನಿಧಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಸ ವಿಲೇವಾರಿ ಘಟಕವನ್ನು ಅರಂಭಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತ ಗ್ರಾಮ ಪಂಚಾಯಿತಿಯಿAದ ಮಾಹಿತಿ ಬಯಸಿದ ಹಿನ್ನೆಲೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾ ಹಣಾಧಿಕಾರಿ ಜಯಣ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್, ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಸೇರಿದಂತೆ ಅನೇಕ ಸದಸ್ಯರ ತಂಡ, ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ರುವ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ೩೫೦ ಕುಟುಂಬದ ಸದಸ್ಯರು ಕೇಂದ್ರದಲ್ಲಿ ಸಭೆ ನಡೆಸಿ ಮುಂದಿನ ೧೯ ರಂದು ಜಿಲ್ಲಾಧಿಕಾರಿಗೆ ಮನವಿ ನೀಡಲು ತೀರ್ಮಾನ ತೆಗೆದು ಕೊಂಡಿದ್ದು, ಸಮರ್ಪಕವಾದ ಸ್ಪಂದನ ದೊರಕದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗು ವುದು ಎಂದು ತಿಳಿಸಿದ್ದಾರೆ.
ಇದಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಈಗಾಗಲೇ ಕಸ ವಿಲೇವಾರಿ ಘಟಕವನ್ನು ತೆರಯುವಂತೆ ಜಿಲ್ಲಾಡಳಿತ ಸೂಚನೆಗಳನ್ನು ನೀಡಿದೆ ಈ ಕೇಂದ್ರದಲ್ಲಿ ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸುವುದು. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತರೆ ಕಸವನ್ನು ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ಹಾಕಲಾಗುವುದು. ಯಾವುದೇ ರೋಗ ರುಜಿನ ಬಾರದಂತೆ ಕ್ರಮ ಕೈಗೊಂಡು ಸರಕಾರದ ನಿಯಮನುಸಾರವಾಗಿ ಆರಂಭಿಸಲು ಸೂಚನೆ ಇರುವುದರಿಂದ ಮತ್ತು ಸ್ಥಳÀ ಗುರುತು ಮಾಡಿರುವುದರಿಂದ. ಆರಂಭಿಸಲು ಸಿದ್ಧತೆಗಳನ್ನು ಅಡಳಿತ ಮಂಡಳಿಯ ಸೂಚನೆಯಂತೆ ಮಾಡಲಾಗುವುದು ಎಂದರು.