ಸೋಮವಾರಪೇಟೆ, ಮಾ. ೧೭: ನಾವು ಪ್ರತಿಷ್ಠಾನ ಕೊಡಗು ವತಿಯಿಂದ ಹಕ್ಕಿಗೊಂದು ಗುಟುಕು ಅಭಿಯಾನ ಈಗಾಗಲೇ ಆರಂಭವಾಗಿದ್ದು, ಏ. ೧೦ರ ವರೆಗೆ ನಡೆಯಲಿದೆ. ಮಕ್ಕಳು ಸೇರಿದಂತೆ ಸಂಘ ಸಂಸ್ಥೆಗಳು ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರತಿಷ್ಠಾನದ ಸಂಸ್ಥಾಪಕರರಾದ ಗೌತಮ್ ಕಿರಗಂದೂರು ಮತ್ತು ಸುಮನ ಗೌತಮ್ ತಿಳಿಸಿದ್ದಾರೆ.

ಪರಿಸರದ ಸಮತೋಲನದಲ್ಲಿ ಹಕ್ಕಿಗಳ ಪಾತ್ರ ದೊಡ್ಡದು. ಅದಕ್ಕಾಗಿ ಪಕ್ಷಿ ಸಂಕುಲದ ಸಂತಾನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಪ್ರತಿಷ್ಠಾನ ಹಮ್ಮಿಕೊಂಡಿದ್ದು, ತಮ್ಮ ಮನೆಯಂಗಳದಲ್ಲಿ ಅಥವಾ ತಾರಸಿ ಮೇಲೆ ಹಕ್ಕಿಗಳಿಗೆ ನೀರು, ಆಹಾರ ಇಟ್ಟು ಅದರ ಜೊತೆ ಫೋಟೊ ಕ್ಲಿಕ್ಕಿಸಿ ೯೮೮೦೦೫೦೮೮೧, ೯೧೬೪೧೩೧೬೩೬ಗೆ ವಾಟ್ಸಾಪ್ ಕಳುಹಿಸಿ ಬಹುಮಾನ ಗೆಲ್ಲಬಹುದು. ಆಯ್ದ ಮೊದಲ ಮೂರು ಅತ್ಯುತ್ತಮ ಫೋಟೋಗಳಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.