ಸಿದ್ದಾಪುರ, ಮಾ. ೧೭: ಕ್ಷÄಲ್ಲಕ ವಿಚಾರಕ್ಕೆ ಸಂಬAಧಿಸಿದAತೆ ಯುವಕರ ನಡುವೆ ಪರಸ್ಪರ ಹೊಡೆದಾಟ ನಡೆದು ಉಭಯ ಕಡೆಯವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲ್ಲಿಹುದಿಕೇರಿ ಗ್ರಾಮದ ನಿವಾಸಿಯಾಗಿರುವ ರಾಶಿಕ್ ಎಂಬಾತ ನೆಲ್ಲಿಹುದಿಕೇರಿಯ ಮುಖ್ಯ ರಸ್ತೆಯ ಹೊಟೇಲ್ ಬಳಿ ನಿಂತಿರುವ ಸಂದರ್ಭದಲ್ಲಿ ಕ್ಷÄಲ್ಲಕ ವಿಚಾರ ಸಂಬAಧಿಸಿ ನೆಲ್ಲಿಹುದಿಕೇರಿ ಗ್ರಾಮದ ಯುವಕರಾದ ಶೀಯಾಬ್, ಸಲಾಂ, ಇಮ್ರಾನ್, ಫಾಸೀಲ್, ಮೋಯ್ದಿನ್ ಸೇಇ ರಾಶಿಕ್ ಮೇಲೆ ಹಲ್ಲೆ ನಡೆಸಿದರು ಎಂದು ರಾಶಿಕ್‌ನ ಕುಟುಂಬಸ್ಥರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಐವರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ. ಈ ನಡುವೆ ರಾಶೀಕ್ ನೌಷೀದ್ ಹರ್ಷದ್, ಸೈಪುದ್ದೀನ್, ಆಶೀಕ್, ಉಬೈದ್, ಅಬೂ ಈ ಏಳು ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಪಾಯಿಸ್ ಕೆ.ಹೆಚ್.ರವರು ಸಿದ್ದಾಪುರ ಠಾಣೆಗೆ ಪುಕಾರು ನೀಡಿದ್ದು, ಈ ಹಲ್ಲೆ ಪ್ರಕರಣ ಸಂಬAಧ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಹೊಡೆದಾಟ ಪ್ರಕರಣ ಸಂಬAಧಿಸಿದ ಉಭಯ ಕಡೆಗಳ ವಿರುದ್ಧ ಸಿದ್ದಾಪುರ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.